ಹುಲಿ ಗಣತಿಗಾಗಿ ಉದ್ಯಾನವನ ಪ್ರವೇಶ ನಿರ್ಬಂಧ

ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಕುದುರೆಮುಖ ರಾಷ್ಟ್ರೀಯ ಉದ್ಯಾನವನ
Published on

ಪ್ರಮುಖ ಮುಖ್ಯಾಂಶಗಳು

  • ಜ.5ರಂದು ಆರಂಭವಾಗಲಿರುವ ಹಿನ್ನೆಲೆ
  • ಜ.12ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ

ಕಳಸ: ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಜ.5ರಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಚಾರಣ ಪಥಗಳು ಮತ್ತು ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದು, ಜ.5ರಿಂದ 12ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ಹುಲಿ ಗಣತಿ ಸುಗಮವಾಗಿ ನಡೆಯಲು ಅರಣ್ಯ ಇಲಾಖೆಯು ಕುದುರೆಮುಖ ಚಾರಣ, ಗಂಗಡಿಕಲ್ ಚಾರಣ, ಕುರಿಂಜಾಲ್ ಚಾರಣ, ವಾಲಿಕುಂಜ ಕೆರೆಕಟ್ಟೆ ಚಾರಣ, ನೇತ್ರಾವತಿ ಚಾರಣ, ಕೊಡಚಾದ್ರಿ ಮಾಲೂರು ಚಾರಣ, ಕೊಡಚಾದ್ರಿ ಹಿಡ್ಲುಮನೆ ಜಲಪಾತ ಚಾರಣ, ನರಸಿಂಹ ಪರ್ವತ ಮಲ್ಲಂದೂರು ಚಾರಣ, ನರಸಿಂಹ ಪರ್ವತ ಕಿಗ್ಗ ಚಾರಣ, ವಾಲಿಕುಂಜ ಕಾರ್ಕಳ ಚಾರಣ, ಬಂಡಾಜೆ ಓಲಂಬ್ರ ಚಾರಣ ತಾಣಗಳ ಪ್ರವೇಶ ನಿರ್ಬಂಧಿಸಲಾಗಿದೆ. ಕೇವಲ ಚಾರಣ ಪಥಗಳಲ್ಲದೆ, ಈ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಲಪಾತಗಳಿಗೂ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಗಣತಿ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಮತ್ತು ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಒಟ್ಟು ಎಂಟು ದಿನ ಪ್ರವಾಸವನ್ನು ಯೋಜಿಸದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಚಾರಣ ಪಥಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಇಲಾಖೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net