ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್‌ಜೈನ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿರುವುದು ಸಕಾಲಿಕವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿನಿಯರು ದೈಹಿಕ ಹಾಗೂ ಮಾನಸಿಕವಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಿಎಂಎಸ್ ಸಂಚಾಲಕಿ ಸುಲೋಚನಾ, ಪ್ರಭಾರ ಪ್ರಾಚಾರ್ಯೆ ಆರ್.ಸುಜಾತ ಕುಮಾರಿ, ಕಸಾಪ ಕಸಬಾ ಹೋಬಳಿ ನೂತನ ಅಧ್ಯಕ್ಷ ತಕ್ಷಕ್ ಕುಮಾರ್, ಸಹ ಶಿಕ್ಷಕಿ ಶಾರದ ಇದ್ದರು.