ಸಸಿ ಬೆಳೆಯುತ್ತಿದ್ದಂತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು, ಸಸಿ ಬೆಳೆಯಲು ಮಳೆ ಸಹಕಾರ ನೀಡಿತ್ತು. ಈಗ ರೈತರು ಸಸಿಕೀಳುವ ಹಾಗೂ ನಾಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಮೂರ‌್ನಾಲ್ಕು ದಿನ ನಿರಂತರವಾಗಿ ಸುರಿದ ಮಳೆ ಭತ್ತದ ಸಸಿ ನಾಟಿಗೆ ವರದಾನವಾಗಿದೆ. ಮಳೆ ಹೆಚ್ಚಾದರೆ ಹೊಳೆ ಸಾಲಿನ ಗದ್ದೆಗಳು ಜಲಾವೃತವಾಗುತ್ತದೆ. ಆ ಗದ್ದೆಗಳಿಗೆ ಈಗಲೆ ನಾಟಿ ಮಾಡಿದರೆ ನದಿ ಉಕ್ಕಿ ಹೊಳೆ ಸಾಲಿನ ಗದ್ದೆಗಳಲ್ಲಿ ವಾರಗಟ್ಟಲೆ ಪ್ರವಾಹದ ನೀರು ನಿಂತಾಗ ನಾಟಿ ಮಾಡಿದ ಸಸಿ ಕೊಳೆತು ಹೋಗುತ್ತದೆ. ಇದರಿಂದಾಗಿ ಹೇಮಾವತಿ, ಜಪಾವತಿ, ಸುಂಡೆಕೆರೆ ಹಳ್ಳ, ಸುಣ್ಣದಹಳ್ಳ ಸೇರಿದಂತೆ ನದಿಯ ಸಾಲಿನ ಗದ್ದೆಗಳಿಗೆ ಆಗಸ್ಟ್ ಅಂತ್ಯದ ವೇಳೆಗೆ ರೈತರು ನಾಟಿ ಮಾಡಲು ಆರಂಭಿಸುತ್ತಾರೆ.