ಮಾರ್ಗದ ಕ್ಯಾಂಪ್ ಭಾಗದಲ್ಲಿ ಇದ್ದ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದರಿಂದ ಎರಡು ವರ್ಷ ಕಾಮಗಾರಿ ನಡೆದು ಟ್ಯಾಂಕ್ ನಿರ್ಮಿಸಲಾಗಿದೆ. ಅದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಮಾರ್ಗದ ಕ್ಯಾಂಪ್, ಬಳ್ಳಾರಿ ಕ್ಯಾಂಪ್, ಹೊಸಳಮ್ಮ ಬಡಾವಣೆ, ಅಶೋಕ ನಗರ, ಬೂತನಗುಡಿ ಬೀದಿ, ಉಪ್ಪಾರ ಕ್ಯಾಂಪ್, ಭಗವತ್ ನಗರ, ಭೋವಿ ಕಾಲನಿ ಸೇರಿದಂತೆ ವಲಯದ 7 ವಾರ್ಡ್‌ಗಳ ಸಾವಿರಾರು ಜನರಿಗೆ ಕೊಳವೆ ಬಾವಿ ನೀರು ಆಧಾರವಾಗಿದೆ. ಸಿದ್ದವಾಗಿರುವ ಟ್ಯಾಂಕ್ ಉದ್ಘಾಟನೆಯಾದರೆ ಇಲ್ಲಿನ ಜನತೆಗೆ ಭದ್ರಾ ನೀರು ಸಿಗುವ ನಿರೀಕ್ಷೆಯಲ್ಲಿದ್ದಾರೆ.