ವಿದ್ಯುತ್ ಪರಿವರ್ತಕ ಬದಲಾವಣೆಗೆ ಅಧಿಕಾರಿಗಳ ನಿರ್ಲಕ್ಷೃ

 ಕಡೂರಿನ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು.
ಕಡೂರಿನ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು.
Published on
ಕಡೂರು: ಮಳೆಯಿಲ್ಲದೆ ಪರಿತಪಿಸುತ್ತಿರುವ ರೈತರಿಗೆ ವಿಫಲವಾಗಿರುವ ಪರಿವರ್ತಕಗಳನ್ನು ಬದಲಾಯಿಸಿಕೊಡಲು ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಕುಂಕನಾಡಿನ ಬಸಪ್ಪ ಆರೋಪಿಸಿದರು.
ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಈಗಾಗಲೇ ಹಾಕಿರುವ ಬೆಳೆ ಕೈಕೊಟ್ಟಿದೆ. ಉಳಿದಿರುವ ಅಲ್ಪಸ್ವಲ್ಪ ತೋಟಗಳನ್ನು ಉಳಿಸಿಕೊಳ್ಳಲು ಕೊಳವೆ ಬಾಯಿಗಳನ್ನು ಆಶ್ರಿಯಿಸಲಾಗುತ್ತಿದೆ. ಕೆಟ್ಟು ಹೋಗುತ್ತಿರುವ ಪರಿವರ್ತಕಗಳನ್ನು ಕೂಡಲೇ ಬದಲಾಯಿಸಿ ಕೊಟ್ಟರೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಹೆಚ್ಚುವರಿ ಟಿಸಿಗಳನ್ನು ಅಳವಡಿಸಿಕೊಡಲು ಅಧಿಕಾರಿಗಳು ಮುಂದಾಗಬೇಕಿದೆ ಎಂದರು.
ಮೆಸ್ಕಾಂ ಇಇ ರವಿಕಿರಣ್ ಮಾತನಾಡಿ, ವಿಫಲವಾದ ಟಿಸಿಗಳಲ್ಲಿ ಅನಧಿಕೃತ ಐಪಿ ಸ್ಥಾವರಗಳನ್ನು ಅಧಿಕೃತಗೊಳಿಸಿದರೆ ಹೆಚ್ಚುವರಿ ಟಿಸಿಗಳನ್ನು ಅಳವಡಿಸಿಕೊಡಲು ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸೂರಾಪುರದ ಮೋಕ್ಷಧಾರ ಮಾತನಾಡಿ, ನಾವು ತೆಂಗಿನ ನಾರಿನ ಘಟಕ ನಡೆಸುತ್ತಿದ್ದು, ಈ ಭಾಗದಲ್ಲಿ ಉಂಟಾಗುವ ವಿದ್ಯುತ್ ಅಡಚಣೆಯಿಂದ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಮೆಸ್ಕಾಂ ಪವರ್ ಮ್ಯಾನ್ ಸಿಬ್ಬಂದಿಗೆ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮಗೆ ಪ್ರತ್ಯೇಕ ಜಿಒಎಸ್ ಅಳವಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಮಲ್ಲೇಶ್ವರದ ತೋಟದ ಮನೆಗಳಲ್ಲಿ ವಿದ್ಯುತ್ ಸಂಪರ್ಕಕ್ಕೆ ಟಿಸಿ ಅಳವಡಿಸಿಕೊಡುವಂತೆ ಮಲ್ಲೇಶ್ವರದ ಕೆಂಚಪ್ಪ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಇಇ ಮಂಜುನಾಥ್, ವಿದ್ಯುತ್ ಸಂಪರ್ಕ ಕಲ್ಪಿಸಲು ಈ ಭಾಗದಲ್ಲಿ ಅವಶ್ಯವಿರುವ ಅಗತ್ಯ ದಾಖಲೆ ಒದಗಿಸಿದರೆ ವಿದ್ಯುತ್ ಸರಬರಾಜಿಗೆ ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಮೆಸ್ಕಾಂ ಅಧೀಕ್ಷಕ ಮಂಜುನಾಥ್, ಎಇಇ ಎಸ್.ಮಂಜುನಾಥ್, ಸಹಾಯಕ ಇಂಜಿನಿಯರ್ ಸಿ.ಎಂ.ಪ್ರಸನ್ನ, ಸಹಾಯಕ ಇಂಜಿನಿಯರ್ ಎಚ್.ಚಂದ್ರಪ್ಪ, ಸಿ.ವಿ.ರಾಜು, ಕಿರಿಯ ಇಂಜಿನಿಯರ್ ಬಸವರಾಜಪ್ಪ, ಆರ್. ಶಿವಕುಮಾರ್, ಎನ್.ವಿರೇಶ್, ಸಿಬ್ಬಂದಿ ಭಾಗ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net