ಅಧಿಕಾರಿಗಳೇ ಎಚ್ಚರಿಕೆಯಿಂದ ಎಸ್‌ಐಆರ್ ಪ್ರಕ್ರಿಯೆ ನಿರ್ವಹಿಸಿ

ಕಡೂರಿನ ಸಖರಾಯಪಟ್ಟಣದಲ್ಲಿ ಎಸ್‌ಐಆರ್ ಪ್ರಗತಿಯಲ್ಲಿ ಕುಂಠಿತವಾಗಿರುವ ಮತಗಟ್ಟೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಭೇಟಿ ನೀಡಿ ಮ್ಯಾಪಿಂಗ್ ಪರಿಶೀಲಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹಾಗೂ ಬಿಎಲ್‌ಒ ಅಧಿಕಾರಿಗಳು ಇದ್ದರು.
ಕಡೂರಿನ ಸಖರಾಯಪಟ್ಟಣದಲ್ಲಿ ಎಸ್‌ಐಆರ್ ಪ್ರಗತಿಯಲ್ಲಿ ಕುಂಠಿತವಾಗಿರುವ ಮತಗಟ್ಟೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಭೇಟಿ ನೀಡಿ ಮ್ಯಾಪಿಂಗ್ ಪರಿಶೀಲಿಸಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹಾಗೂ ಬಿಎಲ್‌ಒ ಅಧಿಕಾರಿಗಳು ಇದ್ದರು.
Published on
ಕಡೂರು: ಜಿಲ್ಲಾದ್ಯಂತ ಆರಂಭಗೊಳ್ಳುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಿಂದ ಅರ್ಹ ಮತದಾರರು ದೂರ ಉಳಿಯದಂತೆ ಬಿಎಲ್‌ಒಗಳ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಭಂವರ್‌ಸಿಂಗ್ ಮೀನಾ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಡೆದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು, ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿರುವ ಮಾನದಂಡಗಳಂತೆ ಅಧಿಕಾರಿಗಳು ಕ್ರಮವಹಿಸಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಜೂ.30ರಿಂದ ಜು.29ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಜತೆಗೆ ಬೂತ್‌ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮಾಹಿತಿ ಪಡೆದು ಮ್ಯಾಪಿಂಗ್ ಜೋಡಣೆಗೆ ಕ್ರಮ ವಹಿಸಬೇಕಿದೆ. ಈಗಾಗಲೇ ಪ್ರಗತಿಯಲ್ಲಿ ಕುಂಠಿತವಾಗಿರುವ ತಾಲೂಕಿನ ಕಡೂರು, ಬೀರೂರು ಮತಗಟ್ಟೆಗಳ ವ್ಯಾಪ್ತಿಯ ಅಧಿಕಾರಿಗಳು ನಿರ್ಲಕ್ಷೃವಹಿಸದೆ ನಿಗಪಡಿಸಿರುವ ಗುರಿಯನ್ನು ಎರಡ್ಮೂರು ದಿನಗಳೊಗಾಗಿ ಪ್ರಗತಿ ಕಾಣಬೇಕಿದೆ. ಇದಕ್ಕೆ ತಹಸೀಲ್ದಾರ್ ಅವರು ಹೆಚ್ಚಿನ ನಿಗಾವಹಿಸುವಂತೆ ನಿರ್ದೇಶಿಸಿದರು.
ಕಡೂರು ತಾಲೂಕು ಕಚೇರಿಯಲ್ಲಿನ ಅಭಿಲೇಖಾಯದ ಕೊಠಡಿಗೆ ತೆರಳಿ ಡಿಜಿಟಲಿಕರಣ ಕಾರ್ಯಪ್ರಗತಿ ಪರಿಶೀಲಿಸಿದರು. ಈ ನಡುವೆ ಕಡೂರು, ಸಖರಾಯಪಟ್ಟಣ, ಬೀರೂರು ಹೋಬಳಿಗಳಲ್ಲಿನ ಕಡಿಮೆ ಪ್ರಗತಿ ಸಾಧಿಸಿದ ಮತಗಟ್ಟೆಗಳಿಗೂ ಖುದ್ದು ಭೇಟಿ ನೀಡಿ ಜಿಲ್ಲಾಧಿಕಾರಿ ಮ್ಯಾಪಿಂಗ್ ಪರಿಶೀಲನೆ ನಡೆಸಿ ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಸಸಿಗಳ ನೆಡುವಿಕೆಗೆ ಚಾಲನೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಬಿಸಿಎಂ ಅಧಿಕಾರಿ ದೇವರಾಜ್, ಕಡೂರು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಬಿಎಲ್‌ಒ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net