ತೆರಿಗೆ ವ್ಯಾಪ್ತಿಯಿಂದ ಗ್ರಾಮ ಪಂಚಾಯಿತಿ ಆಸ್ತಿಗಳನ್ನು ಕೈ ಬಿಡುವುದಕ್ಕೆ ಆಕ್ಷೇಪ

ಎನ್.ಆರ್.ಪುರದಲ್ಲಿ ನಡೆದ ಶೃಂಗೇರಿ ರೈತ ಒಕ್ಕೂಟದಿಂದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಮಾತನಾಡಿದರು.
ಎನ್.ಆರ್.ಪುರದಲ್ಲಿ ನಡೆದ ಶೃಂಗೇರಿ ರೈತ ಒಕ್ಕೂಟದಿಂದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಮಾತನಾಡಿದರು.
Published on: 

ಎನ್.ಆರ್.ಪುರ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಟ್ಟಿದ ಕಟ್ಟಡ, ಮನೆಗಳ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳನ್ನು ಕೈ ಬಿಡುವಂತೆ ಆದೇಶಿಸಿರುವುದನ್ನು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘವೇಂದ್ರ ಖಂಡಿಸಿದ್ದಾರೆ.

ಈ ಹಿಂದೆ ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಗ್ರಾಪಂ ಕಂದಾಯ ವಿಧಿಸುತ್ತಿತ್ತು. ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆಯು 2025ರ ಅನ್ವಯ ತೆರಿಗೆ ನಿರ್ಧರಣೆ ಮತ್ತು 2.0.ತಂತ್ರಾಂಶದಿಂದ ಆಸ್ತಿಗಳನ್ನು ಕೈ ಬಿಡಬೇಕು ಎಂದು ಆದೇಶಿಸಿದೆ. ಈ ಬಗ್ಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಸುತ್ತೋಲೆ ಬಂದು ತಿಂಗಳು ಕಳೆದರೂ ಶೃಂಗೇರಿ ಕ್ಷೇತ್ರದ ಶಾಸಕರು ಎಲ್ಲೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ದೂರಿದರು.

ನೂತನ ಅದೇಶದ ಪ್ರಕಾರ ರಾಜ್ಯ ಅಥವಾ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳ ಭೂಮಿ ಮತ್ತು ನಿವೇಶನಗಳಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಇರುವುದಿಲ್ಲ ಮತ್ತು ಈಗಾಗಲೇ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟಿರುವ ಆಸ್ತಿಗಳನ್ನು ಸಹ ಕೈ ಬಿಡುವಂತೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.

ಾರ್ಮ್ ನಂ. 50, 53 ಹಾಗೂ 94ಸಿ, 94 ಸಿಸಿಸಿ ದಾಖಲೆಗಳನ್ನು ನೀಡಬೇಕು ಎಂದು ಕಂದಾಯ ಇಲಾಖೆಗೆ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ರೈತರ ಪರವಾಗಿ ಈ ದಾಖಲೆಗಳನ್ನು ಇಟ್ಟುಕೊಂಡು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಕಾನೂನು ಹೋರಾಟ ಮಾಡಲಾಗುವುದು. ಬರಗಾಲದ ಹಿನ್ನಲೆಯಲ್ಲಿ ರೈತರಿಗೆ ಎಕರೆಗೆ ಕನಿಷ್ಠ 50 ಸಾವಿರದಿಂದ 1 ಲಕ್ಷ ರೂ. ಪರಿಹಾರ ನೀಡಬೇಕು ಮನಿ ಮಾಡಿದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ತಾಲೂಕು ಅಧ್ಯಕ್ಷ ಪ್ರದೀಪ್, ಕ್ಷೇತ್ರ ಸಂಚಾಲಕ ಅಶೋಕ್ ನೀಲುವಾನಿ, ಕ್ಷೇತ್ರ ವಕ್ತಾರ ಪ್ರಮೋದ್ ನೀಲುವಾನಿ, ವಿಕಾಸ್ ಬಂಗುವಾನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net