ಸರ್ವೇ ನಂ.138ರಲ್ಲಿ ನೀರಾವರಿ ಕೆರೆ ಇದ್ದರೂ, ಸರ್ವೇ ನಂ.139ರ ನಿವಾಸಿಗಳಿಗೂ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಪ್ರಭಾವಿಗಳ ಒತ್ತುವರಿ ಉಳಿಸಲು ಸಾಮಾನ್ಯ ಜನರ ಒತ್ತುವರಿಗೆ ತೆರವಿಗೆ ಅಧಿಕಾರಿಗಳು ಸರ್ವೇಯನ್ನು ತಪ್ಪಾಗಿ ಮಾಡಿ ಕಂದಾಯ ಜಾಗವನ್ನು ಕೆರೆ ಎಂದು ಬದಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನೋಟಿಸ್‌ಅನ್ನು ಮರು ಪರಿಶೀಲಿಸುವಂತೆ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.