ಕುದುರೆಗುಂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಲಾಭಿವದ್ಧಿ ಸಮಿತಿ ಅಧ್ಯಕ್ಷ ಪಾಪಣ್ಣ ಉದ್ಘಾಟಿಸಿದರು.
Published on:
Copied
Follow Us
ಕೊಪ್ಪ:ಪತ್ರಿಕೆ ಮತ್ತು ಪರಿಸರ ಎರಡು ಮುಖ್ಯವಾಗಿದೆ. ಜ್ಞಾನಕ್ಕಾಗಿ ಪತ್ರಿಕೆ ಬೇಕು, ಜಗತ್ತು ಉಳಿವಿಗಾಗಿ ಪರಿಸರ ಬೇಕು ಎಂದು ವಲಯ ಅರಣ್ಯಾಧಿಕಾರಿ ಸಿ.ಎ.ದಯಾನಂದ್ ಹೇಳಿದರು.
ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಶ್ಚಿಮಘಟ್ಟದ ಪ್ರದೇಶದವರಾದ ನಾವುಗಳು ಕಾಡು, ಅರಣ್ಯದ ಜತೆ ಬದುಕು ಸಾಗಿಸುತ್ತಿದ್ದೇವೆ. ಪಶ್ಚಿಮಘಟ್ಟದಲ್ಲಿ ಹುಟ್ಟಿರುವ ನದಿಗಳನ್ನು ಶೇ.40 ರಷ್ಟು ಭಾರತದ ಜನರು ಅವಲಂಬಿಸಿದ್ದಾರೆ. ಹೆಚ್ಚು ನದಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಹುಟ್ಟುವುದರಿಂದ ಚಿಕ್ಕಮಗಳೂರನ್ನು ನದಿಗಳ ನಾಡು ಎಂದು ಕರೆಯಬಹುದು ಎಂದರು.
ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾಪಣ್ಣ ಮಾತನಾಡಿ, ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ದಿನ ಪತ್ರಿಕೆಗಳನ್ನು ಓದುವುದರಿಂದ ಮಕ್ಕಳಿಗೆ ಉಪಯೋಗವಾಗುತ್ತದೆ. ವಿದ್ಯಾರ್ಥಿಗಳು ಟಿವಿ ನೋಡುವುದಕ್ಕಿಂತ ಮೊಬೈಲ್ ಬಳಸುವುದಕ್ಕಿಂತ ಪುಸ್ತಕ, ಪತ್ರಿಕೆಗಳತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪತ್ರಕರ್ತ ಉದಯಕುಮಾರ್ ಜೈನ್ ಮಾತನಾಡಿ, ಪತ್ರಿಕಾ ಕ್ಷೇತ್ರ ಸಮಾಜದ ಒಳಿತು ಬಯಸುವ, ಸಮಾಜದಲ್ಲಿ ನಡೆಯುವ ಘಟನೆ ತಿಳಿಸುವ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕ್ಷೇತ್ರ ಎಂದು ತಿಳಿಸಿದರು.
ಹಿರಿಯ ಪತ್ರಿಕಾ ವಿತರಕ ಟಿ.ಅಶೋಕ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಸಾಹಿತಿ ಎಸ್.ಎನ್.ಚಂದ್ರಕಲಾ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಂ.ರವಿಕಾಂತ್, ಮುಖ್ಯಶಿಕ್ಷಕ ಧನಂಜಯ್ ಮೇದೂರ್,
ಸಂಘದ ಗೌರವಾಧ್ಯಕ್ಷ ಎಚ್.ಆರ್.ಸಂಜೀವ, ಗೌರವ ಸಲಹೆಗಾರ ಬಿ.ಎಸ್.ಸತೀಶ್, ಉಪಾಧ್ಯಕ್ಷ ರಮೇಶ್ ರಂಗಶ್ರೀ, ಜಿಲ್ಲಾ ಸಮಿತಿ ಸದಸ್ಯ ಗೋಪಾಲ್ ಬಸರಿಕಟ್ಟೆ, ಪ್ರಧಾನ ಕಾರ್ಯದರ್ಶಿ ಮಣಿಕಂಠನ್ ಕಂದಸ್ವಾಮಿ, ಸಹ ಕಾರ್ಯದರ್ಶಿ ನಾಗರಾಜ್ ಎನ್.ದೇವಾಡಿಗ, ಸದಸ್ಯ ಕೆ.ಇ.ನಾಗರಾಜ್, ಎಸ್.ವಿಕ್ರಂ ಇದ್ದರು.