ರಾಮದೇವರ ನೂತನ ಬಿಂಬ ಪ್ರತಿಷ್ಠಾಪನೆ ಜು.1ಕ್ಕೆ

ತರೀಕೆರೆ ತುದಿಪೇಟೆ ಮಾಚೇನಹಳ್ಳಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ರಾಮದೇವರ ನೂತನ ದೇವಾಲಯ.
ತರೀಕೆರೆ ತುದಿಪೇಟೆ ಮಾಚೇನಹಳ್ಳಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ರಾಮದೇವರ ನೂತನ ದೇವಾಲಯ.
Published on
ಲಿಂಗದಹಳ್ಳಿ: ತರೀಕೆರೆಯ ತುದಿಪೇಟೆಯಲ್ಲಿರುವ ಮಾಚೇನಹಳ್ಳಿ ಗ್ರಾಮದಲ್ಲಿ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ರಾಮದೇವರ ದೇವಸ್ಥಾನದಲ್ಲಿ ಶ್ರೀ ರಾಮದೇವರ ನೂತನ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕುಂಬಾಭಿಷೇಕ ಮುಂತಾದ ಜುಲೈ 1ರಿಂದ 3ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಜುಲೈ 1ರಂದು ಬೆಳಿಗ್ಗೆ 7.30 ಕ್ಕೆ ಗೇಹಾ ಪ್ರತಿಗ್ರಹ ಪ್ರಾರ್ಥನೆ, ತೋರಣ ಮೂಹರ್ತ, ಉಗ್ರಾಣ ಮುಹೂರ್ತ ಕಂಕಣ ಬಂಧನ , ಅವ್ಯಗಣ ಯಾಗ, ಗೋಪೂಜೆ, ಗಂಗಾಪೂಜೆ, ಬಿಂಬ ಶುದ್ಧಿ , ಸಂಜೆ 5.30 ಕ್ಕೆ ವಾಸ್ತು ಹೋಮ, ರಾಕ್ಷೋಜ್ಞ ಹೋಮ, ವಾಸ್ತು ಪೂಜೆ, ದಿಕ್ಪಾಲಬಾಲ, ಬಿಂಬಾವಾಸ, ಆದಿವಾಸ, ಹೋಮ, ಗೋಪುರ ಕಳಸಾವಾಸ ನಂತರ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ಜು.2 ರಂದು ಬೆಳಗ್ಗೆ ಶುದ್ಧ ಪುಣ್ಯನವಗ್ರಹ ಪೂಜೆ , ನವಗ್ರಹದಾನ ಮತ್ತು ಬೆಳಗ್ಗೆ 6.48ಕ್ಕೆ ಶ್ರೀರಾಮದೇವರ ಬಿಂಬ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಗರುಡಗಂಭ ಪ್ರತಿಷ್ಠೆ, ರಾಮತಾರಕ ಹೋಮ, ಲಕ್ಷ್ಮೀ ಹೃದಯ ಹೋಮ, ಅಲಂಕಾರ ಪೂಜೆ, ಮಹಾ ಪೂಜೆಗಳು ನಡೆಯಲಿದೆ. ಸಂಜೆ 7.30ಕ್ಕೆ ದೀಪಾರಾಧನೆ, ಸಾಮೂಹಿಕ ಅರ್ಚನೆ, ಅಲಂಕಾರ ಪೂಜೆ, ಬ್ರಹ್ಮ ಕಳಸ, ಮಂಡಲ ರಚನೆ, ಕಲಾಶಾದಿವಾಸ, ರಂಗಪೂಜೆ, ನಂತರ ಮಹಾಪೂಜೆ ನಡೆಯಲಿದೆ.
ಜು.3ರಂದು ಪುಣ್ಯಹಾವಾಚನ ಪ್ರಧಾನ ಹೋಮ, ಗಣಹೋಮ, ಬೆಳಗ್ಗೆ 8.45 ರ ಕಟಕ ಲಗ್ನದ ಶುಭ ಮಹೂರ್ತದಲ್ಲಿ ಶ್ರೀ ರಾಮದೇವರಿಗೆ ಬ್ರಹ್ಮ ಕುಂಬಾಭಿಷೇಕ, ಗೋಪುರ ಕಲಶಾಭಿಷೇಕ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಕಾರ್ಯಕ್ರಮಗಳಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಕಾಗಿನಾಲೆ ಮಹಾಸಂಸ್ಥಾನ ಮಠದ ಶ್ರೀನಿರಂಜನಾಂದ ಪುರಿ ಸ್ವಾಮೀಜಿ, ವಿನಯ್ ಗುರೂಜಿ, ಹೊಸದುರ್ಗ ಭಗೀರಥ ಪೀಠಾಧ್ಯಕ್ಷ ಪುರುಷೋತ್ತಮನಂದಾ ಪುರಿಮಹಾ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ, ಮುಖ್ಯಅತಿಥಿಗಳಾಗಿ ಶಾಸಕ ಜಿ.ಹೆಚ್.ಶ್ರೀನಿವಾಸ್, ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ ಎಸ್.ಎಲ್.ಬೋಜೆಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net