19.90 ಲಕ್ಷ ರೂ. ನಿವ್ವಳ ಲಾಭ (Tarikere)

ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಪಿಎಸಿಎಸ್‌ನಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಿ.ಎನ್.ಸಿದ್ದೇಗೌಡ ಮಾತನಾಡಿದರು. ದೇವಿರಪ್ಪ, ಜಿ.ಇ.ಪ್ರಭು, ಸುರೇಶ್, ತಿಪ್ಪೇಸ್ವಾಮಿ, ವಿಜಯಕುಮಾರ್ ಇತರರಿದ್ದರು.
ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಪಿಎಸಿಎಸ್‌ನಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಿ.ಎನ್.ಸಿದ್ದೇಗೌಡ ಮಾತನಾಡಿದರು. ದೇವಿರಪ್ಪ, ಜಿ.ಇ.ಪ್ರಭು, ಸುರೇಶ್, ತಿಪ್ಪೇಸ್ವಾಮಿ, ವಿಜಯಕುಮಾರ್ ಇತರರಿದ್ದರು.
Published on
ತರೀಕೆರೆ: ನಮ್ಮ ಸಂಘವು 2025-26ನೇ ಸಾಲಿಗೆ 19.90 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬಗ್ಗವಳ್ಳಿ ಪಿಎಸಿಎಸ್ ಅಧ್ಯಕ್ಷ ಸಿ.ಎನ್.ಸಿದ್ದೇಗೌಡ ತಿಳಿಸಿದರು.
ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಬಗ್ಗವಳ್ಳಿ ಪಿಎಸಿಎಸ್ 1,906 ಸದಸ್ಯರು ಹಾಗೂ 92.69 ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ 653 ಸದಸ್ಯರಿಗೆ 7.82 ಕೋಟಿ ರೂ. ಕೆಸಿಸಿ ಸಾಲ ವಿತರಿಸಿದೆ. ಬಂದ ಲಾಭಾಂಶದಲ್ಲಿ ಷೇರುದಾರರಿಗೆ ಡಿವಿಡೆಂಟ್ ರೂಪದಲ್ಲಿ ಹಣ ಹಂಚಿಕೆ ಮಾಡಲಾಗುವುದು ಎಂದರು.
ಸಂಘ ಆರಂಭವಾಗಿ 50 ವರ್ಷ ಪೂರ್ಣಗೊಂಡಿದ್ದು ಸುವರ್ಣ ಮಹೋತ್ಸವ ಆಚರಣೆ ಜತೆ ಚನ್ನಾಪುರ ಗ್ರಾಮದಲ್ಲಿ ದಾಸ್ತಾನು ಹಾಗೂ ಮಾರಾಟ ಮಳಿಗೆ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.  
ಸಭೆಯಲ್ಲಿ ಪಿಎಸಿಎಸ್ ಉಪಾಧ್ಯಕ್ಷ ದೇವಿರಪ್ಪ, ನಿರ್ದೇಶಕರಾದ ಜಿ.ಇ.ಪ್ರಭು, ಪ್ರಸನ್ನ, ಸುರೇಶ್, ವಿಜಯಕುಮಾರ್, ತಿಪ್ಪೇಸ್ವಾಮಿ, ಬಿ.ಪಿ.ನವೀನ್, ಸೋಮಯ್ಯ, ಭುವನೇಶ್ವರಿ, ಮಮತಾ, ಮೂಡಲಪ್ಪ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಲಕ್ಷ್ಮಣನಾಯ್ಕ, ಸಿಇಒ ವಿನಯ್, ಸಿಬ್ಬಂದಿ ಗೀತಾ, ರಾಕೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net