ತಾಲೂಕು ಕಚೇರಿ ಆರಂಭದಿಂದ ಸಾರ್ವಜನಿಕರಲ್ಲಿ ಹೊಸದೊಂದು ಆಶಾಭಾವನೆ ಮೂಡಿತ್ತು. ಇನ್ನು ಮುಂದೆ ಮೂಡಿಗೆರೆ ತಾಲೂಕಿಗೆ ಅಲೆದಾಡುವುದು ತಪ್ಪುತ್ತದೆ. ವರ್ಷಗಟ್ಟಲೆ ನೆನಗುದಿಗೆ ಬಿದ್ದಿರುವ ಕಂದಾಯ ಕೆಲಸಗಳು, ಆಡಳಿತಾತ್ಮಕ ಪ್ರಕ್ರಿಯೆಗಳು ಇನ್ನು ಮುಂದೆ ಸ್ಥಳೀಯವಾಗಿಯೇ ವೇಗವಾಗಿ ನಡೆಯಲಿವೆ ಎಂದು ಜನಸಾಮಾನ್ಯರು ನಂಬಿದ್ದರು. ಆದರೆ, ತಾಲೂಕು ಕಚೇರಿ ಆರಂಭವಾಗಿ ಕೇವಲ ನಾಲ್ಕು ವರ್ಷಗಳಲ್ಲಿ ನಡೆದ ಹತ್ತಾರು ತಹಸೀಲ್ದಾರ್‌ಗಳ ಮ್ಯೂಸಿಕಲ್ ಚೇರ್‌ಆಟ ತಾಲೂಕಿನ ಅಭಿವೃದ್ಧಿಯನ್ನು ನುಂಗಿ ಹಾಕಿದೆ.