ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಬಿಳಗುಳ ಗ್ರಾಮದ ಸಿದ್ಧಾರ್ಥ ವನದ ಸಮೀಪ, ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮುದ್ರೆಮುನೆ ನಿರ್ಜನ ಪ್ರದೇಶ, ಹ್ಯಾಂಡ್‌ಪೋಸ್ಟ್, ಬಿದರಹಳ್ಳಿ ಸಾರಿಗೆ ಬಸ್ ಘಟಕದ ಎದುರು, ಗೆಂಡೆಹಳ್ಳಿ ರಸ್ತೆ ಬದಿ, ಪಟ್ಟಣದ ಕೆ.ಎಂ.ರಸ್ತೆಯ ಮಾಂಸದ ಅಂಗಡಿ ಎದುರಿನ ಪ್ರದೇಶ ಕಸ ಸುರಿಯುವ ತಾಣಗಳಾಗಿವೆ. ಈ ಸ್ಥಳಗಳಿಗೆ ಸ್ಥಳೀಯರು ಮಾತ್ರವಲ್ಲದೇ ಅಕ್ಕಪಕ್ಕದ ಗ್ರಾಮದವರು, ದಾರಿ ಹೋಕರು, ಪ್ರವಾಸಿಗರೂ ಕಸ ಸುರಿದು ಹೋಗುತ್ತಾರೆ.