ಗ್ರಾಮಗಳಲ್ಲಿ ಒಂಟಿಸಲಗ ಸಂಚಾರ

ಹರವಿನಗಂಡಿ ಪಾಳ್ಯದ ರಸ್ತೆಯಲ್ಲಿ ಕಾಡಾನೆ ಹೋಗುತ್ತಿರುವಾಗ ಬಾಲಕ ಅಂಗಳಕ್ಕೆ ಓಡಿಹೋಗುತ್ತಿರುವುದು.
ಹರವಿನಗಂಡಿ ಪಾಳ್ಯದ ರಸ್ತೆಯಲ್ಲಿ ಕಾಡಾನೆ ಹೋಗುತ್ತಿರುವಾಗ ಬಾಲಕ ಅಂಗಳಕ್ಕೆ ಓಡಿಹೋಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ
  • ಇಳೇಖಾನ್
ಆಲ್ದೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಕಾಡಾನೆಗಳು ಗ್ರಾಮದೊಳಗೆ ಸಂಚರಿಸುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬುಧವಾರ ಸಂಜೆ ಕಾಡಾನೆಯೊಂದು ಹರವಿನಗಂಡಿಪಾಳ್ಯದ ಮುಖ್ಯ ರಸ್ತೆಯಲ್ಲಿ ಹೋಗಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ ಮನೆಗೆ ಓಡಿಹೋಗಿ ಪ್ರಾಣಾಪಾಯದಿಂದ ರಕ್ಷಿಸಿಕೊಂಡಿದ್ದಾನೆ. 
ಒಂದು ವಾರದಿಂದ ಕಾಡಾನೆಯೊಂದು ಕೋಣಬಸರಿ ಎಸ್ಟೇಟ್, ಹರವಿನಗಂಡಿ ಪಾಳ್ಯ, ಸತ್ತಿಹಳ್ಳಿ, ಗುಲ್ಲನ್‌ಪೇಟೆ, ಹಾಂದಿ, ಕಂಡರ ಕಸ್ಕೆ, ಕಠಾರದಹಳ್ಳಿ, ಇಳೇಖಾನ್ ಹಾಗೂ ಸುತ್ತಮುತ್ತ ಸಂಚರಿಸುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು. ಗುರುವಾರ ಬೆಳಗ್ಗೆ ಹಾಂದಿ ಸಮೀಪದ ನಂದಿಪುರ, ಕೆಳಹಾಂದಿ, ಕಡೆಮಡ್ಕಲ್, ವಿಜಯ ನಗರ ಹಾಗೂ ಸುತ್ತಮುತ್ತ ಸಂಚರಿಸಿದೆ. ಸತ್ತಿಹಳ್ಳಿ ಗ್ರಾಮದೊಳಗೆ ತಡರಾತ್ರಿವರೆಗೆ ಒಂಟಿ ಸಲಗ ಸಂಚರಿಸಿದ್ದು, ಬಹಳ ಹತ್ತಿರದಿಂದ ಆನೆಯನ್ನು ನೋಡಿ ಮೊಬೈಲ್ ೆನ್‌ಗಳಲ್ಲಿ ೆಟೊಗಳನ್ನು ಸೆರೆ ಹಿಡಿದಿದ್ದಾರೆ. 
ಕಾಫಿ ತೋಟಗಳಿಗೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net