ಮುಖ್ಯವಾಗಿ ಕೋರ್ಟ್ ರಸ್ತೆಯಲ್ಲಿರುವ ಕ್ಯಾಂಟೀನ್‌ಗೆ ಹಿಂಡು ಹಿಂಡಾಗಿ ಲಗ್ಗೆ ಇಡುವ ಕೋತಿಗಳು ಅಲ್ಲಿನ ತಿನಿಸುಗಳನ್ನು ಅರ್ಧಂಬರ್ಧ ತಿಂದು ಕೋರ್ಟ್ ಆವರಣದೊಳಗೆ ಬಿಸಾಡುತ್ತವೆ. ಕಟ್ಟಡದ ಕಾರಿಡಾರ್ ಬಳಿ ಮಂಗಗಳನ್ನು ಓಡಿಸಲು ಹೋಗುವವರ ಮೇಲೂ ಎರಗುತ್ತವೆ. ಕೆಲವರ ಮೊಬೈಲ್‌ಗಳು, ಬ್ಯಾಗ್, ಹಣ್ಣಿನ ಪೊಟ್ಟಣಗಳನ್ನು ಕಿತ್ತುಕೊಂಡು ಬಿಸಾಡುತ್ತವೆ. ಕೋತಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.