ಬಿ.ಕಣಬೂರು ಗ್ರಾಪಂನಲ್ಲಿ ಎಸ್‌ಸಿ, ಎಸ್‌ಟಿ ಲಾನುಭವಿಗಳಿಗೆ ಮನೆ ದುರಸ್ತಿಗೆ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸಹಕಾರಿ ಕ್ಷೇತ್ರವನ್ನು ರಾಜಕಾರಣ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಹಕಾರ ಕ್ಷೇತ್ರಕ್ಕೆ ರಾಜಕಾರಣ ಪ್ರವೇಶಿಸುವುದೇ ತಪ್ಪು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿಲ್ಲ. ಚುನಾವಣೆಯಲ್ಲಿ ವಿಜೇತರಾದವರು ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿ ಮತ ಪಡೆದಿಲ್ಲ. ಹಣ, ಹೆಂಡದ ಹೊಳೆಯಿಂದ ಚುನಾವಣೆ ಗೆದ್ದು ರಾಜಕೀಯ ಮಾಡುತ್ತಿದ್ದಾರೆ ಎಂದರು.