ಕಡೂರು ಸಾಹಿತ್ಯ ಸಮ್ಮೇಳನ ಸ್ಮರಣೀಯವಾಗಿ ಉಳಿಯಲಿ

 ಕಡೂರಿನ ಪ್ರವಾಸಿ ಮಂದಿರದಲ್ಲಿ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮಾಜಿ ಶಾಸಕ ಕೆ.ಬಿ ಮಲ್ಲಿಕಾರ್ಜುನ್ ಬಿಡುಗಡೆಗೊಳಿಸಿದರು.
ಕಡೂರಿನ ಪ್ರವಾಸಿ ಮಂದಿರದಲ್ಲಿ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮಾಜಿ ಶಾಸಕ ಕೆ.ಬಿ ಮಲ್ಲಿಕಾರ್ಜುನ್ ಬಿಡುಗಡೆಗೊಳಿಸಿದರು.
Published on
ಕಡೂರು: ಪ್ರಥಮ ಬಾರಿಗೆ ಕಡೂರಿನಲ್ಲಿ ಮೂರು ದಿನ ನಡೆಯುವ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣೀಯವಾಗಿ ಉಳಿಯಲಿ ಎಂದು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ನಡೆದ ಸಮ್ಮೇಳನಕ್ಕಿಂತ ಮತ್ತಷ್ಟು ವಿಶೇಷತೆ ಮೂಡಿಸಲು ಸಮ್ಮೇಳನದ ಸಮಿತಿ ನಿರ್ವಹಣೆಯಲ್ಲಿ ಹೆಚ್ಚು ಜಾಗೃತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನದ ವೇದಿಕೆಯಲ್ಲಿ ಪ್ರಸ್ತಾಪವಾಗುವ ಪ್ರತಿ ವಿಚಾರಗೋಷ್ಠಿಗಳು, ಸಾಹಿತಿಗಳಿಂದ ಚರ್ಚಿತವಾಗುವ ವಿಷಯಗಳ ಬಗ್ಗೆ ದಾಖಲು ಮಾಡಿ ಕೈಪಿಡಿ ಮಾದರಿಯಲ್ಲಿ ಹೊರತರುವ ಪ್ರಕ್ರಿಯೆ ನಡೆಯಬೇಕಿದೆ. ಇದರಿಂದ ಸಮ್ಮೇಳನದ ಪ್ರತಿಯೊಂದು ಅಂಶಗಳು, ಮಂಡನೆಯಾಗಿರುವ ವಿಚಾರಗಳ ಮಾಹಿತಿಯನ್ನು ದಾಖಲೆಗೊಳಿಸಲು ಸಾಧ್ಯವಾಗಲಿದೆ ಎಂದರು.
ಸಮಾರೋಪದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕಿದೆ. ಸರಕಾರದ ಮಟ್ಟದಲ್ಲಿ ಗಂಭೀರವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ನಡೆದಂತಹ ಸಾಹಿತ್ಯ ಸಮ್ಮೇಳನಕ್ಕಿಂತ ಕಡೂರು ಭಾಗದಲ್ಲಿ ನಡೆಯುವ ಸಮ್ಮೇಳನವನ್ನು ಅತ್ಯಂತ ಯಶಸ್ವಿ ಪೂರಕ ನಡೆಸಲು ಈಗಾಗಲೇ ಸಮ್ಮೇಳನದ ಸಮಿತಿ ಶ್ರಮಿಸುತ್ತಿದೆ. ನಾಡು ನುಡಿಯ ಉಳಿವಿಗಾಗಿ ನಡೆಯುತ್ತಿರುವ ಸಮ್ಮೇಳನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಏ.10ರಿಂದ 12ರ ವರೆಗೆ ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುವ ಮೂರು ದಿನದ ಸಾಹಿತ್ಯ ಸಮ್ಮೇಳನಕ್ಕಾಗಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಹಿರಿಯರ ಸಲಹೆ ಮಾರ್ಗದರ್ಶನಗಳನ್ನು ಸಮಿತಿ ಪಡೆದು ಕಾರ್ಯನಿರ್ವಹಿಸಲಾಗುವುದು. ಸಮ್ಮೇಳನವನ್ನು ಯಶಸ್ವಿಯಾಗಿಸಲು ಎಲ್ಲರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net