ನಂಬಿಕೆ, ಶ್ರದ್ಧೆ ಕಾರ್ಯಗತವಾಗಲಿ

ಕೊಪ್ಪದ ಭಂಡಿಗಡಿ ಶಕಟಪುರ ಶ್ರೀ ಮಠದ ಬದರೀ ವಿದ್ಯಾಭಿನವ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ರಜತ ಪಲ್ಲಕ್ಕಿ ಉತ್ಸವ ನಡೆಯಿತು.
ಕೊಪ್ಪದ ಭಂಡಿಗಡಿ ಶಕಟಪುರ ಶ್ರೀ ಮಠದ ಬದರೀ ವಿದ್ಯಾಭಿನವ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ರಜತ ಪಲ್ಲಕ್ಕಿ ಉತ್ಸವ ನಡೆಯಿತು.
Published on
 ಕೊಪ್ಪ:  ನಮ್ಮಲ್ಲಿನ ನಂಬಿಕೆ, ಶ್ರದ್ಧೆಗಳು ಕಾರ್ಯಗತಗೊಂಡು ಅದರಲ್ಲಿನ ಅನುಭವಗಳು ಸಾಧನೆಯಾದಾಗ ಅಲ್ಲಿ ಪ್ರಕಟಗೊಳ್ಳುವ ಪ್ರಕಾಶವೇ ದೇವರು. ಅವ್ಯಕ್ತನಾಗಿದ್ದ ದೇವರು ನಂಬಿದವರಲ್ಲಿ ಬೆಳಕು ಚೆಲ್ಲುತ್ತಾನೆ ಎಂದು ಶಕಟಪುರ ಮಠದ ಬದರೀ ವಿದ್ಯಾಭಿನವ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಭಂಡಿಗಡಿಯಲ್ಲಿರುವ ಶಕಟಪುರ ಶ್ರೀ ಮಠದಲ್ಲಿ ಹಮ್ಮಿಕೊಂಡಿದ್ದ ಸಪ್ತಸಹಸ್ರ ಶ್ರೀಸಪರ್ಯಾ ಪರಿಪೂರ್ತಿ ಮಹೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಆಚಾರ್ಯ ಮಹಾಸ್ವಾಮಿ ಗುರುವಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ದೇವರು ಇದ್ದಾನೆ, ಶಕ್ತಿ ಇದೆ ಎಂಬ ನಂಬಿಕೆ ಇಟ್ಟುಕೊಂಡಿರುವವರ ಸಾಲಿನಲ್ಲಿ ನಾನು ಕೂಡ ಒಬ್ಬ. ಆದೇ ಸಾಲಿನಲ್ಲಿ ನಾನು ಸಾಗುತ್ತಿದ್ದೇನೆ ಎಂದ ಅವರು ನಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಾವು ಪ್ರಯತ್ನ ಪಡಬೇಕು. ಸಂಕಲ್ಪಗಳು ಮಾಡಿಕೊಂಡು ಮುಂದೆ ಸಾಗಬೇಕು ಎಂದರು.
45 ವರ್ಷದ ಹಿಂದೆ ಶ್ರೀಮಠದ ವಾತಾವರಣ ಬೇರೆ ಇತ್ತು. ಈಗ ಬೇರೆಯಾಗಿದೆ. ಇಲ್ಲಿನ ವೈಭವವನ್ನು ನೋಡುವಂತಾಗಿದೆ. ನಾವು ದೇವಿಯ ಆರಾಧನೆ ಮಾಡಿದ ಪರಿಣಾಮ ಅಮ್ಮನವರು ಅನುಗ್ರಹ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಶಕಟಪುರ ಶ್ರೀಗಳು ಅಪಾರ ಜ್ಞಾನ ಹೊಂದಿದ್ದಾರೆ. ಶಕಠಪುರ ಮಠ ಇಷ್ಟು ವೈಭವವನ್ನು ಕಾಣಲು ತಪ್ಪಸ್ಸು, ಅನುಷ್ಠಾನ, ಆಚಾರ, ದೃಢ ನಿಷ್ಠೆಯ ಲವಾಗಿದೆ ಎಂದರು.
ಶ್ರೀಮಠದಲ್ಲಿ ಶ್ರೀಶತಚಂಡಿಕಾಮಹಯಾಗ ಹಾಗೂ ರಾತ್ರಿ ರಜತ ಪಲ್ಲಕ್ಕಿ ಉತ್ಸವ ಮಠದಿಂದ ಭಂಡಿಗಡಿಯ ರಾಜಬೀದಿಯಲ್ಲಿ ನಡೆಯಿತು. ವ್ಯವಸ್ಥಾಪಕರಾದ ರಾಘವ, ಆಡಳಿತಾಧಿಕಾರಿ ಚಂದ್ರಮೌಲೇಶ್ವರ, ಊರಿನ ಪ್ರಮುಖರಾದ ದಿವಕಾರ್ ಭಟ್, ಎಂ.ಪಿ. ಸಂತೋಷ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net