ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿ, 2026ರ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ವಿಳಾಸಕ್ಕೆ ಬಿಎಲ್‌ಒಗಳು ಆಯಾ ಮತದಾರರ ಮಾಹಿತಿ ಇರುವ ಅರ್ಜಿಯನ್ನು ಮನೆಗೆ ಬಂದು ಕೊಡಲಿದ್ದಾರೆ. ಈಗಾಗಲೇ ಸಖರಾಯಪಟ್ಟಣ ಹೋಬಳಿ ಒಳಗೊಂಡ ತಾಲೂಕಿನಲ್ಲಿನ ಒಟ್ಟು 2,51,728 ಮತದಾರರಲ್ಲಿ 2,42,220 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದರು.