Malnad Mahila Cup

Mudigere: MLA Nayana Motamma stated that the participation of women in sports events not only improves their physical and mental health but also fosters a new sense of vitality, self-confidence, and enthusiasm for life.
ಮೂಡಿಗೆರೆಯಲ್ಲಿ ಮಲ್ನಾಡ್ ಮಹಿಳಾ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕಿ ನಯನಾ ಮೋಟಮ್ಮ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಹೊಸಕೆರೆ ರಮೇಶ್, ಕುನ್ನಳ್ಳಿ ರವಿ, ರಘು, ಅನಿಲ್, ಜಗದೀಶ್ ಇತರರಿದ್ದರು.
ಮೂಡಿಗೆರೆಯಲ್ಲಿ ಮಲ್ನಾಡ್ ಮಹಿಳಾ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕಿ ನಯನಾ ಮೋಟಮ್ಮ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಹೊಸಕೆರೆ ರಮೇಶ್, ಕುನ್ನಳ್ಳಿ ರವಿ, ರಘು, ಅನಿಲ್, ಜಗದೀಶ್ ಇತರರಿದ್ದರು.
Published on: 

ಮೂಡಿಗೆರೆ: ಮಹಿಳೆಯರು ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವ ಜತೆಗೆ ಹೊಸ ಚೈತನ್ಯ, ಆತ್ಮವಿಶ್ವಾಸ ಹಾಗೂ ಜೀವನೋತ್ಸಾಹ ಹೆಚ್ಚುತ್ತದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಹೊಯ್ಸಳ ಕ್ರೀಡಾಂಗಣದಲ್ಲಿ ಆತ್ಮೀಯ ಹಾಗೂ ಸುಶಿತಾ ತಂಡದಿಂದ ಆಯೋಜಿಸಿದ್ದ ಮಲ್ನಾಡ್ ಮಹಿಳಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಒತ್ತಡದ ಜೀವನಶೈಲಿಯಲ್ಲಿ ಮಹಿಳೆಯರು ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕು. ಮನೆ ಮತ್ತು ಉದ್ಯೋಗದ ಜವಾಬ್ದಾರಿಯ ನಡುವೆಯೂ ಕ್ರೀಡೆ ಹಾಗೂ ವ್ಯಾಯಾಮಕ್ಕೆ ಹಚ್ಚಿನ ಸಮಯ ಮೀಸಲಿಡಬೇಕು. ಕ್ರೀಡೆ ಕೇವಲ ಮನರಂಜನೆಯಲ್ಲ. ಅದು ಶಿಸ್ತು, ಸಮಯಪ್ರಜ್ಞೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದರು. ಪಪಂ ಮಾಜಿ ಉಪಾಧ್ಯಕ್ಷ ಹೊಸಕೆರೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುನ್ನಳ್ಳಿ ರವಿ, ರಘು, ಅನಿಲ್, ಜಗದೀಶ್ ವಿವಿಧ ತಂಡಗಳ ಮಹಿಳಾ ಕ್ರೀಡಾಪಟುಗಳು ಇದ್ದರು.