ಶಿಕ್ಷಕ ಸಂಪತ್‌ಕುಮಾರ್ ಮಾತನಾಡಿ, ಹಸಿರು ಮನೆ ಅನಿಲಗಳನ್ನು ಕಡಿಮೆ ಮಾಡುವುದರ ಮೂಲಕ ಪರಿಸರವನ್ನು ಸ್ವಚ್ಛ ಪರಿಸರವಾಗಿ ಪರಿವರ್ತಿಸಬೇಕಿದೆ. ಇದನ್ನು ಕಡಿಮೆ ಮಾಡಬೇಕಾದರೆ ಎಲ್ಲರೂ ಸಸಿಗಳನ್ನು ನೀಡುವುದು ಹಾಗೂ ಪೋಷಣೆ ಮಾಡಿ ಬೆಳೆಸುವುದು, ಪರಿಸರ ಪೂರಕ ಜೀವನ ನಿರ್ವಹಣೆ ಮಾಡುವುದು, ಪರಿಸರ ಮಾಲಿನ್ಯ ಆಗದಂತೆ ಎಚ್ಚರ ವಹಿಸುವುದು, ಇ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವುದು, ಕೈಗಾರಿಕೆಗಳಲ್ಲಿ ಉನ್ನತ ತಂತ್ರಜ್ಞಾನ ಬಳಸಿ ತ್ಯಾಜ್ಯಗಳು ಕಡಿಮೆ ಪ್ರಮಾಣದಲ್ಲಿ ಉಂಟು ಮಾಡಲು ಕ್ರಮ ತೆಗೆದುಕೊಳ್ಳುವುದು, ಸೌರ ವಿದ್ಯುತ್ ಹಾಗೂ ಗಾಳಿಯಿಂದ ವಿದ್ಯುತ್ ತಯಾರಿಸಿ ಬಳಸುವುದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸದಂತೆ ಎಚ್ಚರವಹಿಸುವುದು, ಈ ರೀತಿ ಕ್ರಮ ತೆಗೆದುಕೊಳ್ಳುವುದರ ಮೂಲಕ ದೇಶವನ್ನು ಮಾಲಿನ್ಯ ರಹಿತವಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸುವುದಾಗಿ ಹೇಳಿದರು.