ರಾಜೀ ಸಂಧಾನಕ್ಕೆ ಲೋಕದಾಲತ್ ಪೂರಕ

ಎನ್.ಆರ್.ಪುರ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು.
ಎನ್.ಆರ್.ಪುರ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು.
Published on
ಎನ್.ಆರ್.ಪುರ: ಉಭಯ ಕಕ್ಷಿದಾರರರು ರಾಜೀ ಸಂಧಾನ ಮಾಡಿಕೊಳ್ಳಲು ಲೋಕ ಅದಾಲತ್ ಕಾರ್ಯಕ್ರಮ ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ.ರಘುನಾಥ್‌ಗೌಡ ಹೇಳಿದರು.
ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಲಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಲೋಕ ಅದಾಲತ್‌ನಲ್ಲಿ ಬ್ಯಾಂಕ್ ಸಾಲ ವಸೂಲಾತಿ, ಚೆಕ್ ಅಮಾನ್ಯ ಪ್ರಕರಣಗಳು, ಕಾಯಂ ಜನತಾ ನ್ಯಾಯಾಲಯದ ಪ್ರಕರಣಗಳು, ರಾಜೀ ಆಗಬಲ್ಲ ಸಿವಿಲ್ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಲೋಕ ಅದಾಲತ್‌ನಿಂದ ಬಡವರು, ಮಧ್ಯಮ ವರ್ಗದ ಎಲ್ಲರಿಗೂ ಅನುಕೂಲವಾಗಲಿದೆ. ಕಕ್ಷಿದಾರರಿಗೆ ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗ ದರ್ಶನ ನೀಡಲಾಗುವುದು. ಪರಸ್ಪರ ಒಪ್ಪಿಗೆ ಆಗುವಂತೆ ಪ್ರಕರಣ ಇತ್ಯರ್ಥವಾಗುವುದರಿಂದ ಬಾಂಧವ್ಯವೂ ಉಳಿದು, ವಿವಾದವೂ ತೀರ್ಮಾನವಾಗಲಿದೆ ಎಂದು ತಿಳಿಸಿದರು.
ಇಂದು ನಡೆದ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ 110 ಪ್ರಕರಣಗಳಲ್ಲಿ 27,19,699 ರೂ ಹಾಗೂ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿನ 275 ಪ್ರಕರಣಗಳಿಂದ 56,88,357 ರೂ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಮನೆ ಕಂದಾಯ, ನೀರಿನ ಕಂದಾಯ ಹಾಗೂ ಒತರೆ ತೆರಿಗೆಗಳ ಬಾಕಿ ಮೊತ್ತ 5,38,432 ರೂ ಹಾಗೂ ಬ್ಯಾಂಕ್ ವಸೂಲಾತಿ ಪ್ರಕರಣಗಳಿಂದ 8,92,662 ವಸೂಲಾತಿಯಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್, ವಕೀಲರಾದ ಜಿ.ದಿವಾಕರ್, ಎಸ್.ಎಸ್.ಸಂತೋಷ್‌ಕುಮಾರ್, ಪೌಲ್‌ಚೆರಿಯನ್, ಎಚ್.ಎ.ಸಾಜು, ಕೆ.ಪಿ.ಸುರೇಶ್‌ಕುಮಾರ್, ಎಂ.ಆರ್.ಶಿವಪ್ರಸಾದ್, ವಿಧ್ವತ್ ಗೌಡ, ಕಾರ್ತಿಕೇಯನ್, ಇಮ್ರಾನ್, ಅಬ್ದುಲ್, ಶ್ವೇತ, ಲತಾ, ಸಚಿನ್, ಆರ್ಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net