ತರಕಾರಿ ಅಂಗಡಿ ತೆರವಿಗೆ ಸ್ಥಳೀಯರ ವಿರೋಧ (vegetable)

ಹಳೆಮೂಡಿಗೆರೆ ಗ್ರಾಮದಲ್ಲಿ ತರಕಾರಿ ಅಂಗಡಿಯನ್ನು ತೆರೆವುಗೊಳಿಸಲು ಹೋಗಿದ್ದ ತಾಪಂ ಇಒ ದಯಾವತಿ, ಪಿಡಿಒ ಪಿ.ಎನ್.ವೀಣಾ ಸ್ಥಳೀಯರ ಜತೆ ಮಾತುಕತೆ ನಡೆಸಿದರು. ಎಲ್.ಬಿ.ರಮೇಶ್, ಜ್ಯೋತಿ,ಜಾನಕಿ, ಎಂ.ಆರ್.ಜಗದೀಶ್ ಗೌಡ, ವಿನೋದ್ ಕುಮಾರ್, ಯಾಕೂಬ್ ಗೋಣಿಗದ್ದೆ, ಶ್ರೀಕಾಂತ್, ಲಕ್ಷ್ಮಣ್ ಪೂಜಾರಿ ಇತರರಿದ್ದರು.
ಹಳೆಮೂಡಿಗೆರೆ ಗ್ರಾಮದಲ್ಲಿ ತರಕಾರಿ ಅಂಗಡಿಯನ್ನು ತೆರೆವುಗೊಳಿಸಲು ಹೋಗಿದ್ದ ತಾಪಂ ಇಒ ದಯಾವತಿ, ಪಿಡಿಒ ಪಿ.ಎನ್.ವೀಣಾ ಸ್ಥಳೀಯರ ಜತೆ ಮಾತುಕತೆ ನಡೆಸಿದರು. ಎಲ್.ಬಿ.ರಮೇಶ್, ಜ್ಯೋತಿ,ಜಾನಕಿ, ಎಂ.ಆರ್.ಜಗದೀಶ್ ಗೌಡ, ವಿನೋದ್ ಕುಮಾರ್, ಯಾಕೂಬ್ ಗೋಣಿಗದ್ದೆ, ಶ್ರೀಕಾಂತ್, ಲಕ್ಷ್ಮಣ್ ಪೂಜಾರಿ ಇತರರಿದ್ದರು.
Published on
ಮೂಡಿಗೆರೆ: ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173 ಬದಿಯ ತರಕಾರಿ ಅಂಗಡಿ ತೆರವುಗೊಳಿಸಲು ಸೋಮವಾರ ತಾಪಂ ಇಒ ದಯಾವತಿ, ಹಳೆಮೂಡಿಗೆರೆ ಪಿಡಿಒ ಪಿ.ಎನ್.ವೀಣಾ ಅವರು ಸ್ಥಳಕ್ಕೆ ತೆರಳಿದಾಗ ಸಾರ್ವಜನಿಕರು ಜಮಾಯಿಸಿ ತರಕಾರಿ ಅಂಗಡಿ ತೆರವುಗೊಳಿಸಲು ಅವಕಾಶ ನೀಡದಿದ್ದರಿಂದ ಅಧಿಕಾರಿಗಳು ಬರಿಗೈಲಿ ಹಿಂದಿರುಗಬೇಕಾಯಿತು.
ಹಳೆಮೂಡಿಗೆರೆ ಗ್ರಾಮದಲ್ಲಿ ವಿಲಿಯಂ ಫೆರ್ನಾಂಡಿಸ್ ಎಂಬುವವರಿಗೆ ಸೇರಿದ 5 ಗುಂಟೆ ಹಿಡುವಳಿ ಜಾಗವನ್ನು ಬಾಡಿಗೆಗೆ ಪಡೆದು ಕಳೆದ 10 ವರ್ಷದಿಂದ ಯೂಸುಫ್ ಎಂಬುವರು ತರಕಾರಿ ಮತ್ತು ಹಣ್ಣು ಅಂಗಡಿ ನಡೆಸುತ್ತಿದ್ದಾರೆ. ತರಕಾರಿ ಅಂಗಡಿಗೆ ವಿಲಿಯಂ ಫೆರ್ನಾಂಡಿಸ್ ಅವರು ತಮ್ಮ ಸ್ವಂತ 5 ಗುಂಟೆ ಜಾಗ ನೀಡಿದ್ದಾರೆ. ಅವರ ಸಹೋದರಿ ಮತ್ತು ಸಹೋದರ 10 ವರ್ಷದಿಂದ ವಾಗ್ವಾದಕ್ಕಿಳಿದು ತರಕಾರಿ ಅಂಗಡಿಯಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಗ್ರಾಪಂ ಹಾಗೂ ಪೊಲೀಸರಿಗೂ ದೂರು ನೀಡಿದ್ದಾರೆ.
 ತರಕಾರಿ ಅಂಗಡಿ ತೆರವುಗೊಳಿಸಲು ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತಾಪಂ ಅಧಿಕಾರಿಗಳು ಮತ್ತು ಪೊಲೀಸರು ಹಲವಾರು ಬಾರಿ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಲು ಮುಂದಾದಾಗ ಸಾರ್ವಜನಿಕರು ಅವಕಾಶ ನೀಡಿಲ್ಲ.  ಈ ಬಾರಿ ಸಚಿವ ಕೆ.ಜೆ.ಜಾರ್ಜ್‌ಗೆ ದೂರು ನೀಡಿ ತರಕಾರಿ ಮತ್ತು ಹಣ್ಣಿನ ಅಂಗಡಿಯನ್ನು ತೆರವುಗೊಳಿಸಲು ಗ್ರಾಪಂನಿಂದ ನೋಟಿಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂ ಇಒ ದಯಾವತಿ ಸ್ಥಳೀಯರ ಮನವೊಲಿಸಿ ಅಂಗಡಿ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ಅವಕಾಶ ನೀಡದಿದ್ದರಿಂದ ಇನ್ನೊಮ್ಮೆ ದೂರು ಬರದಂತೆ ನೋಡಿಕೊಳ್ಳಿ. ಇಲ್ಲವಾದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಾಪಸಾಗಿದ್ದಾರೆ.
 ಜಾಗದ ಮಾಲೀಕ ವಿಲಿಯಂ ಫೆರ್ನಾಂಡಿಸ್ ಮಾತನಾಡಿ, ನನ್ನ ಸಹೋದರಿ ನನಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾರೆ. ನನ್ನ ಮೇಲೆ ಆಗಾಗ ದೂರು ನೀಡುತ್ತಿದ್ದಾರೆ. ತರಕಾರಿ ಅಂಗಡಿಯಿಂದ ಯಾರಿಗೂ ತೊಂದರೆಯಿಲ್ಲ. ಅಧಿಕಾರಿಗಳು ಮಾತ್ರ ನನ್ನ ಸಹೋದರಿ ಮಾತು ಕೇಳಿ ನೋಟಿಸ್ ನೀಡುವುದು ಸರಿಯಲ್ಲ ಎಂದರು.
ಈ ವೇಳೆ ಮಾಜಿ ಗ್ರಾಪಂ ಸದಸ್ಯರಾದ ಜ್ಯೋತಿ, ಜಾನಕಿ, ತಾಲೂಕು ಕರವೇ ಅಧ್ಯಕ್ಷ ವಿನೋದ್ ಕುಮಾರ್, ಮುಖಂಡರಾದ ಎಂ.ಆರ್.ಜಗದೀಶ್ ಗೌಡ, ಯಾಕೂಬ್ ಗೋಣಿಗದ್ದೆ, ಜಗದೀಶ್, ಶ್ರೀಕಾಂತ್, ಲಕ್ಷ್ಮಣ್ ಪೂಜಾರಿ, ಕಿಟ್ಟು ಪೂಜಾರಿ, ನಂಜುಂಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net