ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ

ಕಡೂರಿನ 5ನೇ ವಾರ್ಡ್‌ನ ಪಾರ್ಕ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಕಡೂರಿನ 5ನೇ ವಾರ್ಡ್‌ನ ಪಾರ್ಕ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
Published on
ಕಡೂರು: ಕೇವಲ ಗಿಡಮರಗಳನ್ನು ನೆಡುವುದರಿಂದ ಪರಿಸರ ದಿನಾಚರಣೆ ಆಗುವುದಿಲ್ಲ. ಸಸಿಗಳನ್ನು ನೆಟ್ಟು ಅವುಗಳು ಮರಗಳಾಗಿ ಬೆಳೆಯುವಂತೆ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ 5ನೇ ವಾರ್ಡ್‌ನಲ್ಲಿರುವ ನೂತನ ಪಾರ್ಕ್‌ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕ, ಜ್ಞಾನಭಾರತಿ ಇಂಗ್ಲೀಷ್ ಶಾಲೆ ಮತ್ತು ಪುರಸಭೆ ಸಹಯೋಗದಲ್ಲಿ ಸಸಿ ನೆಡುವಿಕೆಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಾವು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಮೂಲಕ ಗಿಡ ಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ ಎಂದರು.
ಪಟ್ಟಣದ ವಿವಿಧ ಬಡಾವಣೆಗಲ್ಲಿ ಸಸಿಗಳನ್ನು ನೆಡುವ ಮೂಲಕ ಜನರಲ್ಲಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪುರಸಭೆ ಅನುಮತಿಯೊಂದಿಗೆ ಮುಂದಿನ ದಿನಗಳಲ್ಲಿ ಪಟ್ಟಣದ ಪಾರ್ಕ್‌ಗಳಲ್ಲಿ ಸಸಿಗಳನ್ನು ನೆಟ್ಟು ಜನಜಾಗೃತಿ ಮೂಡಿಸಲಾಗುವುದು ಎಂದರು.
ಶಾಲೆ ಮಕ್ಕಳು ಮತ್ತು ಬಡಾವಣೆಗಳ ನಿವಾಸಿಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಿ ಪರಿಸರ ಸಮತೋಲನ ಕಾಪಾಡುವ ಜತೆ ಜನರಲ್ಲೂ ಪರಿಸರ ಜಾಗೃತಿಯ ಅರಿವು ಮೂಡಿಸುವುದು ಇದರ ಉದ್ದೇಶ. ಈ ನಿಟ್ಟಿನಲ್ಲಿ ಪರಿಸರ ಉಳಿಸಲು ಯುವ ಸಮೂಹ ಮುಂದಾಗಬೇಕಿದೆ ಎಂದರು.
ಜ್ಞಾನಭಾರತಿ ಶಾಲೆ ಅಧ್ಯಕ್ಷೆ ಸುಜಾತ ಕೃಷ್ಣಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ಸೋಮಶೇಖರ್, ಶಿಕ್ಷಕರಾದ ನಾಗರಾಜು, ಪ್ರಸನ್ನ, ಚಂದ್ರಶೇಖರ್, .ಟಿ.ಆರ್.ಲಕ್ಕಪ್ಪ, ವೈ.ಎಂ.ತಿಪ್ಪೇಶ್, ವಿದ್ಯುತ್ ಗುತ್ತಿಗೆದಾರ ಲೋಕೇಶ್, ಪುರಸಭೆ ಸಿಬ್ಬಂದಿ ತಿಮ್ಮಯ್ಯ, ಶ್ರೀನಿವಾಸ ಮೂರ್ತಿ, ಶ್ರೇಯಸ್, ಜಗದೀಶ್, ವೈ.ಮಲ್ಲಾಪುರ ಲೋಕೇಶ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net