ಕಳಸ: ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿಯೂ ಮಾತೆಯರ ಸಹಕಾರ ಅಗತ್ಯ. ಪ್ರತಿಯೊಬ್ಬರೂ ಸ್ವಉದ್ಯೋಗ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು ಎಂದು ದೀಪಾ ಮಾತಾಜಿ ತಿಳಿಸಿದರು.
ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಅಹಲ್ಯಾಬಾಯಿ ಮಾತೃಭಾರತಿ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಶ್ರದ್ಧೆಯಿಂದ ವಿದ್ಯೆ ಕಲಿತರೆ ಭವಿಷ್ಯ ಉಜ್ವಲವಾಗಲಿದೆ ಎಂದರು.
ಶಾಲೆ ಮುಖ್ಯಶಿಕ್ಷಕ ಆನಂದ್ ಗುರೂಜಿ ಮಾತನಾಡಿ, ಹೆಣ್ಣು ಸಬಲೆಯಾದಾಗ ಮಾತ್ರ ಮನೆ ಸದೃಢವಾಗಿರಲು ಸಾಧ್ಯ. ನಾವೆಲ್ಲರೂ ಶ್ರೇಷ್ಠರ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ವೀಣಾ ಮಾತಾಜಿ ಅವರು ಅಹಲ್ಯಾಬಾಯಿ ಅವರ ಜೀವನ ಹಾಗೂ ಸಾಧನೆಗಳನ್ನು ವಿವರಿಸಿದರು. ಅಹಲ್ಯಾಬಾಯಿ ಮಾತೃಭಾರತಿ ಸಮಿತಿ ಅಧ್ಯಕ್ಷರಾಗಿ ಸುಜಾತಾ, ಕಾರ್ಯದರ್ಶಿಯಾಗಿ ಸುಚಿತಾ ಉದಯ್ ಶೆಟ್ಟಿ, ಸದಸ್ಯರಾಗಿ ರಶ್ಮಿ, ವಿನೋದಾ, ಆಶಾ ಸುದೀಶ್, ಸುಕನ್ಯಾ, ನವ್ಯಾ ನಾಗರಾಜ್, ಶ್ರೀಲತಾ, ಜ್ಯೋತಿ, ಉಷಾ ನೇಮಕವಾದರು.