ನಮ್ಮಲ್ಲಿ ಯಾರು ಅಸಮರ್ಥರು ಎಂಬುದನ್ನು ಜನ ತೀರ್ಮಾನಿಸಲಿ

ಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಗ್ಯಾರಂಟಿ ಲಾನುಭವಿಗಳ ಸಮಾವೇಶವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.
ಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಗ್ಯಾರಂಟಿ ಲಾನುಭವಿಗಳ ಸಮಾವೇಶವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.
Published on
ಕೊಪ್ಪ: ಕಾಡಾನೆ ನಿಯಂತ್ರಣಕ್ಕೆ ಸರ್ಕಾರದ ಮಟ್ಟದಲ್ಲಿ ಕ್ರಮಗಳನ್ನು ಕೈಕೊಳ್ಳಲಾಗಿದೆ. ಜೀವ ಕಳೆದುಕೊಂಡ ಕುಟುಂಬದವರಿಗೆ ಪರಿಹಾರ ಒದಗಿಸಲಾಗಿದೆ. ಆದರೇ ಕೆಲವರು ರಾಜಕೀಯ ದುರುದ್ದೇಶದಿಂದ ನನ್ನನ್ನು ಅಸಮರ್ಥ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜನ ತೀರ್ಮಾನಿಸಲಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪುರಭವನದಲ್ಲಿ ಕಸಬಾ ಹೋಬಳಿ ಮಟ್ಟದ ಗ್ಯಾರಂಟಿ ಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ನನಗೆ ಮತ ನೀಡಿದ ಜನರ ಋಣ ತೀರಿಸಲು ಶ್ರಮಿಸಲಾಗುತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿ ಹಾಗೂ ಮಾನವನ ನಡುವೆ ಸಂಘರ್ಷ ಉಂಟಾಗುತ್ತಿದೆ. ಕಾಡಾನೆ ಹಾಗೂ ಕಾಡುಕೋಣ ದಾಳಿಯಿಂದ 13 ಜನರ ಜೀವ ಹಾನಿಯಾಗಿದೆ. ಮೃತರ ಎಲ್ಲ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ ಎಂದರು.
ದಾಳಿ ಮಾಡಿದ ಕಾಡಾನೆಗಳನ್ನು ಬೇರೆ ಯಾವ ಕ್ಷೇತ್ರದಲ್ಲಿಯೂ ಹಿಡಿಸಲು ಮುಂದಾಗಿಲ್ಲ. ಶೃಂಗೇರಿ ಕ್ಷೇತ್ರದಲ್ಲಿ ಮಾತ್ರ ಹಿಡಿಸಲಾಗಿದೆ. ಈ ಹಿಂದೆ ಮೂಡಿಗೆರೆಯಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಜನರು ಹಲ್ಲೆ ನಡೆಸಿದ್ದರೂ ಕಾಡಾನೆ ಸೆರೆ ಹಿಡಿಯಲಿಲ್ಲ, ತೀರ್ಥಹಳ್ಳಿಯಲ್ಲಿ ಈ ಹಿಂದೆ ಎರಡು ಜೀವವನ್ನು ಕಾಡಾನೆ ಬಲಿ ಪಡೆದಿತ್ತು. ಆಗ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರೂ ಕಾಡಾನೆಯನ್ನು ಹಿಡಿಯಲಿಲ್ಲ. ಅದರೆ ನಾನು ಆನೆ ಹಿಡಿಸಿದರೂ ನನ್ನನ್ನು ಅಸಮರ್ಥ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರು ಕಾಡಾನೆ ದಾಳಿಯಲ್ಲಿ ಮೃತಪಟ್ಟರೂ ನಾನು ಪಕ್ಷ ನೋಡದೆ ಸರ್ಕಾರರಿಂದ 5 ಲಕ್ಷ ರೂ. ಪರಿಹಾರದ ಹಣವನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೃತಪಟ್ಟವರಿಗೆ ನಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವೈಯಕ್ತವಾಗಿ ಸಹಾಯ ಮಾಡಲಾಗಿದೆ. ರಸ್ತೆಯಲ್ಲಿ ಹೆಣ ಇಟ್ಟುಕೊಂಡು ರಾಜಕೀಯ ಮಾಡುವ ಮಾಜಿ ಶಾಸಕ ಡಿ.ಎನ್.ಜೀವರಾಜ್ ಎಷ್ಟು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ತಾಪಂ ಇಒ ಎಚ್.ಡಿ ನವೀನ್‌ಕುಮಾರ್, ಪಪಂ ಮುಖ್ಯಧಿಕಾರಿ ಕುರಿಯಾಕೋಸ್, ಗ್ಯಾರಂಟಿ ಸಮಿತಿ ಸದಸ್ಯರಾದ ನಾಗೇಂದ್ರ ಪ್ರಸಾದ್, ವಿಜಯಾನಂದ, ನರೇಂದ್ರ ಶೆಟ್ಟಿ, ಪ್ರವೀಣ್, ಶೋಭಾ, ಪೂರ್ಣಿಮಾ, ರಾಘವೇಂದ್ರ, ವಿಜಯ್‌ಕುಮಾರ್, ಅಬ್ದುಲ್ ಖಾದರ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net