ಮರಾಠಿ ಕ್ಯಾಂಪ್, ಚೌಡಿಕಟ್ಟೆಯ ಗ್ರಾಮದ ಮಕ್ಕಳನ್ನು ಮಂಗಳವಾರವೂ ಪಾಲಕರು ಶಾಲೆಗೆ ಕಳುಹಿಸಿದ್ದರು. ಸೋಮವಾರ ಸಂಜೆ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಎಇಇ ಸಾಗರ್ ಸೇರಿದಂತೆ ವಿವಿಧ ಅಧಿಕಾರಿಗಳು ಚೌಡಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳು ಶಾಲಗೆ ಬರುವ ದಾರಿ ವೈಲ್ಡ್ ಲೈಫ್ ಪ್ರದೇಶವಾಗಿರುವುದರಿಂದ, ಪರ್ಯಾಯ ದಾರಿಗಾಗಿ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಶಾಸಕರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿ, ತುರ್ತಾಗಿ ಪರ್ಯಾಯ ದಾರಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆಂದು ದೇವಂತ್ ಗೌಡ ತಿಳಿಸಿದ್ದಾರೆ.