ಹುಲಿಕೆರೆ ಗ್ರಾಮದಲ್ಲಿ ಚಿರತೆ ಸಂಚಾರ

ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದರು.
ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಆಸ್ಪತ್ರೆ ಹತ್ತಿರ
  • ನಾಲ್ಕೈದು ದಿನಗಳಿಂದ
ಕಡೂರು: ಹುಲಿಕೆರೆ ಗ್ರಾಮದಲ್ಲಿ ಮಂಗಳವಾರ ಚಿರತೆ ಸಂಚಾರದಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ವಾರದ ಹಿಂದೆ ಹುಲಿಕೆರೆ ಗ್ರಾಮದ ಸರ್ಕಾರಿ ಆಸ್ಪತ್ರೆ ಹತ್ತಿರ ಚಿರತೆ ಸಂಚಾರವನ್ನು ಗ್ರಾಮಸ್ಥರು ಕಂಡಿದ್ದರು. ಪದೇ ಪದೆ ಚಿರತೆ ಓಡಾಡುತ್ತಿರುವುದನ್ನು ಗಮನಿಸಿದರೆ ಅದು ಮರಿ ಹಾಕಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ನಾಲ್ಕೈದು ದಿನಗಳಿಂದ ಬೋನನ್ನು ಇಟ್ಟು, ನಾಯಿಯನ್ನು ಕೂಡಿಹಾಕಿದ್ದಾರೆ. ಆದರೆ ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ.  
 ಈ ಕುರಿತು  ಡಿಆರ್‌ಎಫ್‌ಒ ಚಂದ್ರಶೇಖರ್ ಪ್ರತಿಕ್ರಿಯಿಸಿ, ನಾಲ್ಕು ದಿನಗಳಿಂದ ಬೋನನ್ನು ಇರಿಸಿದ್ದೇವೆ. ಆಸ್ಪತ್ರೆ ಅಕ್ಕಪಕ್ಕ ಖಾಸಗಿ ನಿವೇಶನಗಳಿದ್ದು ಅಲ್ಲಿ ಗಿಡಗಂಟಿ ಬೆಳೆದಿವೆ. ಅಲ್ಲಿ ಅಡಗಿರಬಹುದೆಂಬ ಅನುಮಾನ ಮೂಡುತ್ತಿದೆ. ಚಿರತೆ ಸೆರೆ ಹಿಡಿಯಲಾಗುವುದು  ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net