ಎಐ ಕಲಿಕೆಗೆ ಆಂಗ್ಲ ಭಾಷೆ ಅರಿವು ಅಗತ್ಯ

ತರೀಕೆರೆಯಲ್ಲಿ ನವಮಾಧ್ಯಮಗಳ ತರಬೇತಿ ಶಿಬಿರವನ್ನು ಟಿ.ಎಸ್.ಮೋಹನ್‌ಕುಮಾರ್, ಎಂ.ಡಿ.ಮಂಜುನಾಥ್ ಉದ್ಘಾಟಿಸಿದರು.
ತರೀಕೆರೆಯಲ್ಲಿ ನವಮಾಧ್ಯಮಗಳ ತರಬೇತಿ ಶಿಬಿರವನ್ನು ಟಿ.ಎಸ್.ಮೋಹನ್‌ಕುಮಾರ್, ಎಂ.ಡಿ.ಮಂಜುನಾಥ್ ಉದ್ಘಾಟಿಸಿದರು.
Published on
ತರೀಕೆರೆ: ಆಧುನಿಕತೆ ಬೆಳೆದಂತೆ ತಂತ್ರಜ್ಞಾನ, ಕೌಶಲಗಳು ವೇಗವಾಗಿ ವಿಸ್ತಾರಗೊಳ್ಳುತ್ತಿದ್ದರೂ ಯುವ ಪೀಳಿಗೆಗೆ ಇವುಗಳ ಅರಿವು ಕಡಿಮೆಯಾಗಿದೆ. ತಂತ್ರಜ್ಞಾನದ ವಿಚಾರದಲ್ಲಿ ಹಿಂದೆ ಉಳಿದಿದ್ದರೂ ನಮಗೆ ಗೊತ್ತಿಲ್ಲದೆಯೇ ಕೃತಕ ಬುದ್ಧಿಮತ್ತೆಯ ಭಾಗವಾಗಿದ್ದೇವೆ. ಈ ದಿಸೆಯಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗಗಳ ಮಾಹಿತಿ ತಿಳಿದುಕೊಳ್ಳಬೇಕು ಎಂದು ನಂಜೇಶ್ ಬೆಣ್ಣೂರು ಹೇಳಿದರು.
ಪಟ್ಟಣದ ಖಾಸಗಿ ಶಾಲೆಯಲ್ಲಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಬಳಗದಿಂದ ಆಯೋಜಿಸಿದ್ದ ನವಮಾಧ್ಯಮಗಳ ತರಬೇತಿ ಶಿಬಿರದಲ್ಲಿ ಮಾತನಾಡಿ, ನಾವು ಯಾವುದೇ ಕೆಲಸ ಮಾಡುವಾಗ ಆ ಕೆಲಸದ ಸಮಗ್ರ ಮಾಹಿತಿ ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಎಲ್ಲೆಡೆ ಸದ್ದು ಮಾಡುತ್ತಿದ್ದು, ಈ ತಂತ್ರಜ್ಞಾನದಿಂದ ಮುಂದೆ ಸಾಕಷ್ಟು ಉದ್ಯೋಗಾವಕಾಶಗಳು ಸಿಗಲಿವೆ. ಹಾಗಾಗಿ ಎಐ ಕಲಿಕೆ ಅನಿವಾರ್ಯವಾಗಿದ್ದು, ಮೊದಲು ಆಂಗ್ಲ ಭಾಷೆ ಅರಿವು ಕಲಿಯಬೇಕು ಎಂದರು.
ನಾವೀಗ ಸ್ಪರ್ಧಾತ್ಮಕ ಯುಗದಲ್ಲಿದ್ದು, ಕೌಶಲ ವೃದ್ಧಿಸಿಕೊಂಡು ನಿರಂತರ ಕಲಿಕೆ, ಹೊಸ ಹೊಸ ವಿಷಯಗಳ ಅಧ್ಯಯನ ಮಾಡಬೇಕು. ಈ ಸಲುವಾಗಿ ಕಲಿಕಾ ಹಂತದಲ್ಲಿರುವ ಮಕ್ಕಳಿಗೆ ಶಾಲೆಗೆ ತೆರಳಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರೊ. ಬಸವರಾಜ್ ನೆಲ್ಲಿಸರ, ಶಾಲಾ ಮುಖ್ಯಸ್ಥೆ ಹರ್ಷಿಣಿ, ಲೇಖಕ ಟಿ.ಎಸ್.ಮೋಹನ್‌ಕುಮಾರ್, ಎಂ.ಡಿ.ಮಂಜುನಾಥ್, ಕಾರ್ಮಿಕ ಮುಖಂಡ ವೇಲಾಯುಧನ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net