ಸಿಗ್ಬತ್‌ವುಲ್ಲಾ ಮಾತನಾಡಿ, ನಮಗೆ ರಸ್ತೆ ಅಗಲೀಕರಣಕ್ಕೆ ವಿರೋಧವಿಲ್ಲ, ಆಕ್ಷೇಪಣೆಯೂ ಇಲ್ಲ. ಆದರೆ ಪ್ರವಾಸಿ ಮಂದಿರದ ಬಳಿ ಬಾಬಾ ಬುಡನ್‌ಗಿರಿ ಜಾಗವೆಂದು ಅಲ್ಲಿನ ವಾಸಿಗಳಿಗೆ ಖಾತೆಯೆ ಮಾಡಿಕೊಟ್ಟಿಲ್ಲ. ಹಿಂದೆ ಅವರಿಗೆ ಪಪಂಯಿಂದ ಎಲ್ಲ ಮೂಲ ಸೌಕರ್ಯ ನೀಡಲಾಗಿದೆ. ಈಗ ಖಾತೆ ಇಲ್ಲ, ಸದರಿ ಜಾಗಕ್ಕೆ ಹಕ್ಕಿಲ್ಲ ಎಂದು ಅವರಿಗೆ ಪರಿಹಾರ ನೀಡದಿದ್ದರೆ ಹೇಗೆ? ಅಧಿಕಾರಿಗಳು ಹಿಂದೆ ಮಾಡಿದ ತಪ್ಪಿಗೆ ಬಡವರು ನಿರ್ಗತಿಕರಾಗಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಡಬೇಕು ಎಂದು ಒತ್ತಾಯಿಸಿದರು.