ಬೇಸಿಗೆ-ಬೆಸುಗೆಯಲ್ಲಿ ಕರ್ಕೇಶ್ವರ ಗ್ರಾಪಂ ಜಿಲ್ಲೆಗೆ ಪ್ರಥಮ

ಬೇಸಿಗೆ-ಬೆಸುಗೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಕರ್ಕೇಶ್ವರ ಗ್ರಾಪಂಗೆ ಡಿಸಿ ಭನ್ವರ್‌ಸಿಂಗ್‌ಮೀನಾ ಪ್ರಶಸ್ತಿ ವಿತರಿಸಿದರು.
ಬೇಸಿಗೆ-ಬೆಸುಗೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ಕರ್ಕೇಶ್ವರ ಗ್ರಾಪಂಗೆ ಡಿಸಿ ಭನ್ವರ್‌ಸಿಂಗ್‌ಮೀನಾ ಪ್ರಶಸ್ತಿ ವಿತರಿಸಿದರು.
Published on
ಎನ್.ಆರ್.ಪುರ: ಬೇಸಿಗೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ-ಬೆಸುಗೆ ಶಿಬಿರವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದರಿಂದ ಕರ್ಕೇಶ್ವರ ಗ್ರಾಪಂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಇಒ ಎಚ್.ಡಿ.ನವೀನ್‌ಕುಮಾರ್ ತಿಳಿಸಿದರು.
ತಾಲೂಕು ಮಟ್ಟದಲ್ಲಿ ಎಲ್ಲ ಗ್ರಾಪಂಗಳ ಬೇಸಿಗೆ-ಬೆಸುಗೆ ಕಾರ್ಯಕ್ರಮದ ಚಟುವಟಿಕೆಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟಕ್ಕೆ ಶಿಾರಸು ಮಾಡಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಕರ್ಕೇಶ್ವರ ಗ್ರಾಪಂ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಶಿಬಿರದ ಚಟುವಟಿಕೆಗಳನ್ನು ಪರಿಶೀಲಿಸಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆ ವಿಷಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಕಣಬೂರು ಗ್ರಾಪಂ ಕೂಡ ಪ್ರಶಸ್ತಿ ಪಡೆದಿದ್ದು, ಗ್ರಾಪಂಗಳ ಗ್ರಾಮಸ್ಥರು, ಮಾಜಿ ಜನಪ್ರತಿನಿಧಿಗಳು, ಪಿಡಿಒ ಹಾಗೂ ಸಿಬ್ಬಂದಿ,ಗ್ರಂಥಾಲಯದ ಮೇಲ್ವಿಚಾರಕರ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದ್ದಾರೆ.
ಕಂದಾಯ ವಸೂಲಾತಿಯಲ್ಲಿ ಬಿ.ಕಣಬೂರು ಗ್ರಾಪಂ ಹೆಚ್ಚು ಕಂದಾಯ ವಸೂಲಿ, ಕರ್ಕೇಶ್ವರ ಮತ್ತು ಬಾಳೆ ಗ್ರಾಪಂಗಳು ಶೇಕಡವಾರು ವಸೂಲಾತಿಯಲ್ಲಿ ಜಿಲ್ಲೆಗೆ ಶೇ.100ರಷ್ಟು ವಸೂಲಿ ಮಾಡಿ ಪ್ರಶಸ್ತಿಗೆ ಭಾಜನವಾಗಿವೆ. ನರೇಗಾ ಯೋಜನೆಯ ಸಾಧನೆಗಾಗಿ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್‌ಗೆ ತೃತೀಯ ಸ್ಥಾನ ಲಭಿಸಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net