ಅಸೂಯೆ ಬದುಕಿಗೆ ಮಾರಕ

ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಹೊಸದುರ್ಗ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್.ಎಂ.ರೇವಣ್ಣ, ಎ.ಎನ್.ಮಹೇಶ್, ಟಿ.ಎಸ್.ರಮೇಶ್, ಎಂ.ನರೇಂದ್ರ, ಡಿ.ವಿ.ಪದ್ಮರಾಜ್, ಟಿ.ಎಸ್.ಪ್ರಕಾಶ್ ವರ್ಮ ಇತರರಿದ್ದರು.
ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಹೊಸದುರ್ಗ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್.ಎಂ.ರೇವಣ್ಣ, ಎ.ಎನ್.ಮಹೇಶ್, ಟಿ.ಎಸ್.ರಮೇಶ್, ಎಂ.ನರೇಂದ್ರ, ಡಿ.ವಿ.ಪದ್ಮರಾಜ್, ಟಿ.ಎಸ್.ಪ್ರಕಾಶ್ ವರ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಸೂಯೆ ಬದುಕಿಗೆ ಮಾರಕ
  • ಹೊಸದುರ್ಗ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ

ತರೀಕೆರೆ: ಎತ್ತಿನಬಂಡಿಗೆ ಕಡಗೀಲಿನ ಆಧಾರದಂತೆ ದೇಹದ ಬಂಡಿಗೆ ಶರಣರ ಮಾತುಗಳೇ ಆಧಾರ ಎಂದು ಹೊಸದುರ್ಗ ಶ್ರೀ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ದ್ವೇಷ, ಅಸೂಯೆ, ಮತ್ಸರಗಳೇ ಹೆಚ್ಚಾಗುತ್ತಿದ್ದು, ಮಾನವನಾದವನು ಇವೆಲ್ಲವನ್ನೂ ಬಿಟ್ಟು ಸಾರ್ಥಕ ಜೀವನದ ಕಡೆ ಹೆಜ್ಜೆ ಇಡಬೇಕು. ಹೊಟ್ಟೆಕಿಚ್ಚು ಬೇರೆಯವರ ಬದುಕಿಗಿಂತ ಹೊಟ್ಟೆಕಿಚ್ಚು ಪಟ್ಟವರ ಬದಕುಕಿಗೆ ಮಾರಕವಾಗುತ್ತದೆ. ಈ ದಿಸೆಯಲ್ಲಿ ಜೀವನ ಶೈಲಿ ಬದಲಾಯಿಸಿ ಹೊಸ ಆಲೋಚನೆ ಮೂಡುವಂತೆ ನೋಡಿಕೊಳ್ಳುವುದು ಅಗತ್ಯ ಎಂದರು.

ಹೊಸದುರ್ಗದಲ್ಲಿ ಕನಕ ಪೀಠದ ಆವರಣದಲ್ಲಿ ನಿರ್ಮಿಸುತ್ತಿರುವ 58 ಎತ್ತರದ ಏಕಶಿಲಾ ಕನಕಮೂರ್ತಿ ಪ್ರತಿಮೆ ಮುಂದಿನ ವರ್ಷ ಅನಾವರಣಗೊಳಿಸುವ ಚಿಂತನೆ ಇದೆ. ಇದಕ್ಕಾಗಿ 100 ದಿನ ಸಾವಿರ ಹಳ್ಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ 570 ಹಳ್ಳಿಗಳಿಗೆ ಭೇಟಿ ನೀಡಲಾಗಿದ್ದು, ಎಲ್ಲೆಡೆ ಭಕ್ತರ ಸಹಕಾರ ಸಿಗುತ್ತಿದೆ. ಹೊಸದುರ್ಗ ಕನಕ ಗುರುಪೀಠಕ್ಕೆ ತರೀಕೆರೆ ಭಾಗದ ಭಕ್ತರು 11 ಅಡಿ ಎತ್ತರದ ರಥ ನಿರ್ಮಿಸಿಕೊಡಬೇಕು ಎಂದು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಅವರಿಗೆ ಸೂಚಿಸಿದರು.

ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ, ಹಿರಿಯರ ಆಶಯದಂತೆ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿಯವರಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರಥ ನಿರ್ಮಿಸಿ ಎಳೆಯಲಾಗಿದೆ. ಇಂಥ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಿಂದ ಸಮಾಜದಲ್ಲಿ ಸಾಮರಸ್ಯ, ಒಮ್ಮತ ಮೂಡಲಿದೆ ಎಂದರು.

ದೇವರ ಕಾರ್ಯದಲ್ಲಿ ಭಕ್ತಿ ಇರಬೇಕೇ ಹೊರತು ಮೌಢ್ಯವಿರಬಾರದು. ರಾಜ್ಯದಲ್ಲಿ ಪ್ರಥಮವಾಗಿ ಶ್ರೀ ಗುರುರೇವಣಸಿದ್ದೇಶ್ವರ ಸ್ವಾಮಿ ರಥ ನಿರ್ಮಿಸಿದ ಕೀರ್ತಿ ತರೀಕೆರೆಗೆ ಸಲ್ಲುತ್ತದೆ. 1944ರಲ್ಲಿ ಪವಾಡ ಪುರುಷ ಅಕ್ಕಿನಿಂಗಪ್ಪ ನೇತೃತ್ವದಲ್ಲಿ ಸ್ಥಾಪನೆಯಾದ ಸಂಘದಿಂದ ಕುರುಬ ಸಮಾಜ ಸಂಘಟನೆಯಾಗಿದ್ದು, ಪ್ರತಿಯೊಬ್ಬರೂ ದಾನ ಮಾಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.

ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಜಾನಪದ ಗಾಯಕ ಯುಗಧರ್ಮ ರಾಮಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನರೇಂದ್ರ ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ವಿ.ಪದ್ಮರಾಜ್, ಟಿ.ಎಸ್.ಪ್ರಕಾಶ್‌ವರ್ಮ, ಸದಸ್ಯರಾದ ಟಿ.ಜಿ.ಶಶಾಂಕ್, ಚೇತನ್‌ಕುಮಾರ್, ಪ್ರಮುಖರಾದ ಗೊಲ್ಲರಹಳ್ಳಿ ರಂಗಪ್ಪ, ಟಿ.ಎನ್.ಸೋಮಶೇಖರಯ್ಯ, ಟಿ.ಜಿ.ಹರೀಶ್‌ಕುಮಾರ್, ಶಮಿವುಲ್ಲಾ ಷರೀಫ್, ದರ್ಶನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net