ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ದೇವರಾಜ ಅರಸರು, ಯಡಿಯೂರಪ್ಪ, ಬಂಗಾರಪ್ಪ ಮುಂತಾದವರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದು ಮಾತ್ರ ಜನತಾದಳ. ಎಚ್.ಡಿ.ದೇವೇಗೌಡರ ದಿಟ್ಟ ಹೋರಾಟದಿಂದ ರಾಜ್ಯದಲ್ಲಿ ಜನತಾದಳ ಪ್ರಾದೇಶಿಕ ಪಕ್ಷವಾಗಿ 25 ವರ್ಷ ತುಂಬಿವೆ. ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದಲ್ಲಿ ಜನರ ಜತೆಗೆ ಸದಾ ಇರುವ ಜನತಾದಳ ಪಕ್ಷದ ಸಂಘಟನೆಗಾಗಿ ಜನರೊಂದಿಗೆ ಜನತಾದಳ ಎಂಬ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲಾಗುತ್ತಿದೆ ಎಂದರು.