ಜಮೀರ್‌ ಅಹಮದ್‌ ಜೆಡಿಎಸ್‌ ಸೇರ್ಪಡೆ ಊಹಾಪೋಹ

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ
ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ ಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೆ ಯಾವ ರೀತಿ ಪಕ್ಷ ಬಿಟ್ಟು ಹೋದರು ಎಂಬುದು ಗೊತ್ತಿದೆ
  • ಸ್ಪಷ್ಟನೆ ನೀಡಿದ ನಿಖಿಲ್‌ ಕುಮಾರಸ್ವಾಮಿ
ಚಿಕ್ಕಮಗಳೂರು: ದಾವಣಗೆರೆ ಉಪ ಚುನಾವಣೆ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರಕ್ರಿಯಿಸಿದ ನಿಖಿಲ್ ಕುಮಾರ ಸ್ವಾಮಿ ಇದು ಕೇವಲ ಊಹಾಪೋಹ ಮಾತ್ರ. ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪಕ್ಷವನ್ನು ಯಾವ ಸಂದರ್ಭದಲ್ಲಿ ಯಾವ ರೀತಿ ಬಿಟ್ಟು ಹೋದರು, ಹೋಗುವಾಗ ಸಾರ್ವಜನಿಕ ವಲಯದಲ್ಲಿ ಯಾವ ಯಾವ ರೀತಿ ಚರ್ಚೆ ಮಾಡಿದ್ದಾರೆ, ಎಲ್ಲವನ್ನು ಪರಿಗಣಿಸಿ ಅಲ್ಲಿಂದ ಪಕ್ಷದ ವರಿಷ್ಠರು ಯಾರನ್ನು ಕರೆಸಿಕೊಳ್ಳಬೇಕು, ಯಾರನ್ನು ದೂರ ಇಡಬೇಕು ಅನ್ನುವುದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಜಾತ್ಯತೀತ ಜನತಾದಳ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ಎನ್‌ಡಿಎ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ, ಜೆಡಿಎಸ್‌ ತನ್ನ ಸಿದ್ದಾಂತವನ್ನು ಯಾರ ಜೊತೆಗೂ ವಿಲೀನ ಮಾಡಿಲ್ಲ. ಜೆಡಿಎಸ್‌ ಒಂದು ಪ್ರತ್ಯೇಕ ರಾಜಕೀಯ ಪಕ್ಷವಾಗಿದೆ. ಜೆಡಿಎಸ್ ಯಾವತ್ತೂ ಧರ್ಮ ,ಜಾತಿ‌, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಪರಿಕಲ್ಪನೆ ಇಟ್ಟಿಕೊಂಡಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಮತ ಬ್ಯಾಂಕ್‌ಗಾಗಿ ಬಳಕೆ ಮಾಡಿಕೊಂಡಿದ್ದು, ಬಿಟ್ಟರೆ ಅವರನ್ನು ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಮಾಡಿಲ್ಲ.ಇನ್ನು ಮುಂದೆಯಾದರೂ ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net