ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಎಚ್.ಆರ್.ಜಗದೀಶ್ ಹಾಗೂ ಎಚ್.ಒ.ಪ್ರಭಾವತಿ ಅವರನ್ನು ಸಹ ನಿರ್ದೇಶಕರು ಅಭಿನಂದಿಸಿದರು.
Published on:
Copied
Follow Us
ತರೀಕೆರೆ: ಪಟ್ಟಣದ ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಎಚ್.ಆರ್.ಜಗದೀಶ್, ಉಪಾಧ್ಯಕ್ಷರಾಗಿ ಎಚ್.ಒ.ಪ್ರಭಾವತಿ ಅವಿರೋಧ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಬಿ.ಎಸ್.ಮಹೇಶ್ವರಪ್ಪ ಹಾಗೂ ಉಪಾಧ್ಯಕ್ಷ ಎಚ್.ಎಸ್.ಸಂಪ್ರೀತ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಎಚ್.ಆರ್.ಜಗದೀಶ್ ಮತ್ತು ಎಚ್.ಒ.ಪ್ರಭಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ಸಹಾಯಕ ನಿಬಂಧಕ ಸಿ.ಜಿ.ಶಿವಕುಮಾರ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಪ್ರಕಟಿಸಿದರು.
ಅಧ್ಯಕ್ಷ ಎಚ್.ಆರ್.ಜಗದೀಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬ್ಯಾಂಕ್ ಲಾಭದಲ್ಲಿದ್ದು, ಈಗಾಗಲೇ ನೀಡಿರುವ ಸಾಲವನ್ನು ಸಕಾಲದಲ್ಲಿ ವಸೂಲಿ ಮಾಡಲು ಕ್ರಮಕೈಗೊಳ್ಳಲಾಗುವುದು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಹಕ ಸ್ನೇಹಿ ಸೇವೆ ನೀಡಲಾಗುವುದು ಎಂದರು.
ಸದ್ಯದಲ್ಲೇ ತಾಲೂಕಿನ ಕುಂಟಿನಮಡು ಮತ್ತು ದೋರನಾಳು ಗ್ರಾಮದಲ್ಲಿ ಶಿವ ಸಹಕಾರಿ ಬ್ಯಾಂಕ್‌ನ ಹೊಸ ಶಾಖೆ ಆರಂಭಿಸಿ ಸೇವೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.