ಒಂದು ಕಾಲದಲ್ಲಿ ಜನರ ಹಸಿವು ನೀಗಿಸಿದ ಹಲಸು

ಕಳಸದಲ್ಲಿ ನಡೆದ ಹಲಸು ಮೇಳದಲ್ಲಿ ಹಲಸು ಮೇಳದ ಆಯೋಜಕರನ್ನು ಗೌರವಿಸಲಾಯಿತು.
ಕಳಸದಲ್ಲಿ ನಡೆದ ಹಲಸು ಮೇಳದಲ್ಲಿ ಹಲಸು ಮೇಳದ ಆಯೋಜಕರನ್ನು ಗೌರವಿಸಲಾಯಿತು.
Published on
ಕಳಸ: ಹಲಸು ಎಂಬುದು ಕೇವಲ ಒಂದು ಹಣ್ಣಲ್ಲ, ಅದು ಒಂದು ಕಾಲದಲ್ಲಿ ಜನರ ಹಸಿವು ನೀಗಿಸುವ ಪ್ರಮುಖ ಆಹಾರವಾಗಿತ್ತು ಎಂದು ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ರಜಿತ್ ಕೆಳಗೂರು ಹೇಳಿದರು.
ಕಳಸದಲ್ಲಿ ಮೂರು ದಿನ ನಡೆದ ಹಲಸು ಮೇಳದಲ್ಲಿ ಹಲಸು ಮೇಳದ ಆಯೋಜಕರನ್ನು ಕರ್ನಾಟಕ ಜಾನಪದ ಪರಿಷತ್‌ನಿಂದ ಗೌರವಿಸಿ ಮಾತನಾಡಿ, ಕಾಲಕ್ರಮೇಣ ಇಂದಿನ ಯುವ ಪೀಳಿಗೆಗೆ ಹಲಸಿನ ಆರೋಗ್ಯಕರ ಅಂಶಗಳನ್ನು ಕೇವಲ ಪಠ್ಯಪುಸ್ತಕಗಳ ಮೂಲಕ ನೋಡಿ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಮಲೆನಾಡಿನಲ್ಲಿ ಪ್ರತಿ ವರ್ಷ ಅಪಾರ ಪ್ರಮಾಣದ ಹಲಸಿನ ಹಣ್ಣುಗಳು ಸೂಕ್ತ ಬಳಕೆಯಾಗದೆ ಕೊಳೆತು ಹಾಳಾಗುತ್ತಿವೆ ಎಂದರು.
ಈ ಮೇಳ ಮತ್ತು ಕಾರ್ಯಗಾರದ ಮೂಲಕ ವಿವಿಧ ಹಲಸಿನ ತಳಿಗಳನ್ನು ಪರಿಚಯಿಸುವ ಜತೆಗೆ ಹಾಳಾಗುವ ಹಲಸಿನಿಂದ ಏನೆಲ್ಲಾ ವೈವಿಧ್ಯಮಯ ಹಾಗೂ ರುಚಿಕರ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಹಲಸಿಗೆ ಇನ್ನಷ್ಟು ಸೂಕ್ತ ಮಾನ್ಯತೆ ದೊರಕುವುದರೊಂದಿಗೆ ನಮ್ಮ ಸಾಂಪ್ರದಾಯಿಕ ಜಾನಪದ ಆಹಾರ ಪದ್ಧತಿ ಉಳಿಯಬೇಕು ಎಂಬುವುದು ಜಾನಪದ ಪರಿಷತ್‌ನ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಂಚಾಲಕಿ ಮಮ್ತಾಜ್ ಬೇಗಂ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಮನ ಜಯರಾಜ್, ವಕೀಲರಾದ ಮಾಲಾತಿ ರಾವ್, ಕಜಾಪ ಸದಸ್ಯರಾದ ಆಶಾ ರಾಘವೇಂದ್ರ ಐತಾಳ್, ಪೂರ್ಣಿಮ ಪ್ರಮೋದ್ ಪೂರ್ಣಚಂದ್ರ ಹೆಬ್ಬಾರ್, ಗಣೇಶ್, ಉದಯ್, ಶಮೀರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net