ಮಳೆಯಾಗುತ್ತಿರುವುದು ಶುಭ ಸೂಚನೆಯ ಸಂಕೇತ

ತರೀಕೆರೆಯಲ್ಲಿ 7.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಪುರಸಭೆ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಸಚಿವ ಕೆ.ಜೆ.ಜಾರ್ಜ್ ಭೂಮಿ ಪೂಜೆ ನೆರವೇರಿಸಿದರು.
ತರೀಕೆರೆಯಲ್ಲಿ 7.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಪುರಸಭೆ ನೂತನ ಕಚೇರಿ ಕಟ್ಟಡ ಕಾಮಗಾರಿಗೆ ಸಚಿವ ಕೆ.ಜೆ.ಜಾರ್ಜ್ ಭೂಮಿ ಪೂಜೆ ನೆರವೇರಿಸಿದರು.
Published on
ತರೀಕೆರೆ: ಬರ ಪರೀಶೀಲನೆಗೆ ಬಂದ ನಮಗೆ ಮಳೆ ಸ್ವಾಗತ ನೀಡಿರುವುದು ಶುಭ ಸೂಚನೆಯ ಸಂಕೇತ ಎಂದು ಇಂಧನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಪಟ್ಟಣದಲ್ಲಿ ಎಸ್‌ಎ್ಸಿ ಯೋಜನೆ ಹಾಗೂ ಪುರಸಭೆ ನಿಧಿ ಬಳಸಿ ಅಂದಾಜು 7.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಸಭೆ ನೂತನ ಕಚೇರಿ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಲೆನಾಡು ಭಾಗದಲ್ಲಿ ಕುಡಿಯಲು ಮತ್ತು ಮೇವಿಗೆ ಕೊರತೆಯಾಗದಂತೆ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚುತ್ತಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಭದ್ರೆಯಿಂದ ಪೂರೈಸಿಕೊಳ್ಳಲಾಗುವುದು ಎಂದರು.
ಜನ ಸಾಮಾನ್ಯರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಇಂಧನ ಇಲಾಖೆ ಮೂಲಕ ರಾಜ್ಯದ ರೈತರಿಗೆ 20 ಸಾವಿರ ಕೋಟಿ ರೂ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕುಸುಮ್-ಸಿ ಯೋಜನೆಯಡಿ ಒಂದು ಮೆಗಾವ್ಯಾಟ್‌ಗೆ 4 ಕೋಟಿ ರೂ.ಗಳಂತೆ ಖರ್ಚು ಮಾಡಿ ಒಟ್ಟು 270 ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸಲಾಗಿದೆ. ಕುಸುಮ್-ಬಿ ಯೋಜನೆಯಡಿ 600 ರಿಂದ 700 ಮೆಗಾವ್ಯಾಟ್‌ನಷ್ಟು ವಿದ್ಯುತ್ ಆಯಾ ಜಾಗದಲ್ಲೇ ಉತ್ಪಾದಿಸಿ ಅಲ್ಲಿನ ರೈತರಿಗೆ ವಿತರಿಸುವ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪಟ್ಟಣ ಹೊರ ವಲಯದ ಕೆ.ಹೊಸೂರು ಬಳಿ 8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ತಾಂತ್ರಿಕ ಕಾರಣದಿಂದ ಮುಂದೂಡಲಾಗಿದ್ದು, ಭದ್ರಾ ಮೇಲ್ದಂಡೆ, ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ 100ಕ್ಕೂ ಹೆಚ್ಚು ಕೆರೆ ತುಂಬಿಸಲು ಚಿಂತಿಸಲಾಗಿದೆ. ತುಂಗಾ ತಿರುವಿನ ಮೂಲಕ ಭದ್ರಾ ಜಲಾಶಯಕ್ಕೆ 15 ಟಿಎಂಸಿ ನೀರು ಲ್‌ಟಿ ಮಾಡಿಕೊಂಡರೆ ಕುಡಿಯುವ ಸೇರಿ ಬಹುತೇಕ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಟಿ.ಜಿ.ಮಂಜುನಾಥ್, ಪರಮೇಶ್, ಅಂಜಯ್ ಅನಿಲ್‌ಕುಮಾರ್, ಎಂ.ಗಿರಿಜಾ, ಪಾರ್ವತಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಾರೂಕ್, ಟಿ.ಎಸ್.ಪ್ರಕಾಶ್ ವರ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net