ಜಂಟಿ ಸರ್ವೇ ಬಳಿಕ ಹಕ್ಕುಪತ್ರ ವಿತರಣೆ

ಬಾಳೆಹೊನ್ನೂರಿನಲ್ಲಿ ನೂತನ ನಾಡಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಂಡಿಮಠದ 9 ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ನೂರುಲ್ ಹುದಾ, ಚಂದ್ರಮ್ಮ, ಇ.ಸಿ.ಜೋಯಿ, ಹೇಮಲತಾ, ನಟರಾಜ್, ಜುಬೇದಾ, ರವಿಚಂದ್ರ ಇದ್ದರು.
ಬಾಳೆಹೊನ್ನೂರಿನಲ್ಲಿ ನೂತನ ನಾಡಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಂಡಿಮಠದ 9 ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ನೂರುಲ್ ಹುದಾ, ಚಂದ್ರಮ್ಮ, ಇ.ಸಿ.ಜೋಯಿ, ಹೇಮಲತಾ, ನಟರಾಜ್, ಜುಬೇದಾ, ರವಿಚಂದ್ರ ಇದ್ದರು.
Published on
ಬಾಳೆಹೊನ್ನೂರು: ಕ್ಷೇತ್ರಾದ್ಯಂತ ನಡೆಯುತ್ತಿರುವ ಅರಣ್ಯ-ಕಂದಾಯ ಇಲಾಖೆಯ ಜಂಟಿ ಸರ್ವೇ ಬಳಿಕ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಪಟ್ಟಣದಲ್ಲಿ ಶಾಸಕರ ನಿಧಿ ಹಾಗೂ ಕಂದಾಯ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ನಾಡಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಆಶಯದಂತೆ ರಾಜ್ಯಾದ್ಯಂತ ಕಂದಾಯ ಗ್ರಾಮ, ಕಂದಾಯ ಉಪಗ್ರಾಮಗಳ ಯೋಜನೆ ಘೋಷಣೆಯಾಗಿ ಜಾರಿಗೆ ಬಂದಿದೆ. ಇದರ ಅನ್ವಯ ಅಕ್ರಮವಾಗಿ ಮನೆ ಕಟ್ಟಿಕೊಂಡ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ರಾಜ್ಯಾದ್ಯಂತ ಇದುವರೆಗೆ 3.5 ಲಕ್ಷಕ್ಕೂ ಅಧಿಕ ಜನರಿಗೆ ಹಕ್ಕುಪತ್ರಗಳನ್ನು ಈ ಯೋಜನೆಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.
ಎನ್.ಆರ್.ಪುರ ತಾಲೂಕಿನಲ್ಲಿ 57 ಗ್ರಾಮಗಳಲ್ಲಿ 35 ಗ್ರಾಮಗಳ ಜಂಟಿ ಸರ್ವೇ ಮುಕ್ತಾಯಗೊಂಡಿದ್ದು ಉಳಿದ ಗ್ರಾಮಗಳನ್ನು ಶೀಘ್ರವಾಗಿ ಜಂಟಿ ಸರ್ವೇ ನಡೆಸಲಾಗುವುದು. ಈಗಾಗಲೇ ಒತ್ತುವರಿ ಮಾಡಿರುವ ಜಮೀನು, ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಕಾಫಿ ಬೆಳೆ ಹೊರತುಪಡಿಸಿ ಫಾರ್ಮ್ ನಂ.50, 53, 57ರ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಎನ್.ಆರ್.ಪುರ ತಹಸೀಲ್ದಾರ್ ಡಾ. ನೂರುಲ್ ಹುದಾ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಸದಸ್ಯರಾದ ಹೇಮಲತಾ, ಶೇಖ್ ಅಬ್ದುಲ್ಲಾ, ಉಪ ತಹಸೀಲ್ದಾರ್ ಹೇಮಾ, ಪ್ರಮುಖರಾದ ಗೇರುಬೈಲು ನಟರಾಜ್, ಜುಬೇದಾ, ರವಿಚಂದ್ರ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಇಫ್ತೆಖಾರ್ ಆದಿಲ್, ಇಬ್ರಾಹಿಂ ಶಾಫಿ, ಬಿ.ಕೆ.ಮಧುಸೂದನ್, ಮಹೇಶ್ ಆಚಾರ್ಯ, ಶಶಿಕಲಾ, ಗ್ರೀಷ್ಮಾ ಜೈನ್, ಸಮೀಕ್ಷಾ, ನವೀನ್, ಮಂಜು, ಅರುಣ್‌ಕುಮಾರ್, ಹೂವಮ್ಮ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net