ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡದಲ್ಲಿ ಕಸಾಪ ಹಮ್ಮಿಕೊಂಡಿದ್ದ 112ನೇ ಕನ್ನಡ ಸಂಸ್ಥಾಪನಾ ದಿನಾಚರಣೆ ಹಾಗೂ ಸಾವಿರ ಸದಸ್ಯತ್ವ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಇಂದು 112ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. ನಾಡು, ನುಡಿ ಶ್ರೀಮಂತಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದು, ಆಲೂರು ವೆಂಕಟರಾಯರು, ಸುಬ್ಬಣ್ಣ ಸೇರಿದಂತೆ ಹಲವರ ನಿರಂತರ ಶ್ರಮದಿಂದ ಕನ್ನಡ ಶ್ರೀಮಂತಗೊಂಡಿದೆ. ಆದರೆ ಪ್ರಸ್ತುತ ಯುವಕರು ಕನ್ನಡದ ಬೇರುಗಳನ್ನು ಪಸರಿಸಲು ಹಿಂದೇಟು ಹಾಕುತ್ತಿದ್ದಾರೆ. ಕನ್ನಡವನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸಬೇಕಿದೆ ಎಂದರು.