ಭಾರತೀಯ ಸೇನೆ ಸಾಹಸ, ಶೌರ್ಯ ಪ್ರೇರಣೆ

ಬಾಳೆಹೊನ್ನೂರಿನ ನವೋದಯ ವಿದ್ಯಾಲಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೊಂಬತ್ತಿ ಬೆಳಗಿ ವೀರ ಯೋಧರಿಗೆ ಗೌರವ ಸಲ್ಲಿಸಿದರು.
ಬಾಳೆಹೊನ್ನೂರಿನ ನವೋದಯ ವಿದ್ಯಾಲಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೊಂಬತ್ತಿ ಬೆಳಗಿ ವೀರ ಯೋಧರಿಗೆ ಗೌರವ ಸಲ್ಲಿಸಿದರು.
Published on
ಬಾಳೆಹೊನ್ನೂರು: ಭಾರತೀಯ ಸೇನೆಯ ಸಾಹಸ, ಶೌರ್ಯ ಮತ್ತು ತ್ಯಾಗ ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ಜವಾಹರ ನವೋದಯ ವಿದ್ಯಾಲಯದ ಉಪನ್ಯಾಸಕ ಎ.ಪಿ.ನಾಗರಾಜ್ ಹೇಳಿದರು.
ಸೀಗೋಡು ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ,ದೇಶದ ಗಡಿಯಲ್ಲಿ ಕಾಯುವ ಯೋಧರ ಬಲಿದಾನದಿಂದ ನಾವು ಇಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ.
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಮೆರೆದ ಅಪ್ರತಿಮ ಶೌರ್ಯ, ಸಾಹಸವನ್ನು ಪ್ರತಿಯೊಬ್ಬ ಭಾರತೀಯರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ಪ್ರಾಚಾರ್ಯ ಅಕ್ಷಯ್ ಕುಮಾರ್ ದ್ವಿವೇದಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ದೇಶಪ್ರೇಮ ಹಾಗೂ 21ನೇ ಶತಮಾನದ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಸದೃಢ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದರು. ಎನ್‌ಸಿಸಿ ಕೆಡೆಟ್‌ಗಳು ವೀರ ಯೋಧರ ಸ್ಮರಣಾರ್ಥ ಗಾರ್ಡ್ ಆ್ ಹಾನರ್ ಗೌರವ ನೀಡಿದರು. ಸರ್ಜೆಂಟ್ ಎಂ.ಕೆ.ತಪಸ್ವಿ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ದೇಶಭಕ್ತಿಯ ಪ್ರತಿಜ್ಞಾವಿಧಿ ಬೋಧಿಸಿದರು. ಲ್ಯಾನ್ಸ್ ಕಾರ್ಪೋರಲ್ ಜಿ.ಎಸ್.ಮೋಹಿತ್, ಎಚ್.ಎಸ್.ಆದಿತ್ಯ, ಶರಿಣಿ ಪಿ.ಗೌಡ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net