ಜೂನ್ ಅಂತ್ಯದಲ್ಲಿ 22,000 ರೂ ಇದ್ದ ಅರೇಬಿಕಾ ಪಾರ್ಚ್‌ಮೆಂಟ್, ಜುಲೈಗೆ 7ನೇ 26,000 ರೂಗಳಾಗಿವೆ. ಅರೇಬಿಕಾ ಚೆರಿ 12ರಿಂದ 14 ಸಾವಿರಕ್ಕೆ ಏರಿಕೆಯಾಗಿದೆ. ರೋಬಾಸ್ಟಾ 10 ಸಾವಿರದಿಂದ 11ಸಾವಿರಕ್ಕೆ ಏರಿಕೆಯಾಗಿದೆ. ಒಂದು ತಿಂಗಳಲ್ಲಿ ಏರಿಕೆಯಾದ ಈ ಧಾರಣೆಯಿಂದ ಕಾಫಿ ದಾಸ್ತಾನು ಇಟ್ಟವರು ಮಾರಾಟ ಮಾಡಬೇಕಾ, ಅಥವಾ ಇನ್ನು ಉತ್ತಮ ಧಾರಣೆ ಬರುವ ವರೆಗೂ ಕಾಯಬೇಕೂ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.