ಹೆಚ್ಚುವರಿ ತರಗತಿ ಮೂಲಕ ಫಲಿತಾಂಶ ಸುಧಾರಿಸಿ

ಬೀರೂರಿನಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದರು. ತಿಮ್ಮರಾಜು , ಸುಂದರೇಶ್, ನಾಗರಾಜ್, ಎಂ.ಎಚ್.ತಿಮ್ಮಯ್ಯ ಇತರರಿದ್ದರು.
ಬೀರೂರಿನಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಕಡೂರು ಮತ್ತು ಬೀರೂರು ಶೈಕ್ಷಣಿಕ ವಲಯ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಿದರು. ತಿಮ್ಮರಾಜು , ಸುಂದರೇಶ್, ನಾಗರಾಜ್, ಎಂ.ಎಚ್.ತಿಮ್ಮಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ತರಗತಿಗಳನ್ನು ನಡೆಸಿ
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಕ್ರಮ ಕೈಗೊಳ್ಳಬೇಕು

ಬೀರೂರು: ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಮಾಣ ಹೆಚ್ಚಿಸಬೇಕು ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಸೂಚಿಸಿದರು.

ಸೋಮವಾರ ಕಡೂರು-ಬೀರೂರು ಶೈಕ್ಷಣಿಕ ವಲಯಗಳ ಎಸ್‌ಎಸ್‌ಎಲ್‌ಸಿ ಸಿದ್ಧತಾ ಪರೀಕ್ಷೆ-1ರ ಪ್ರಗತಿ ಪರಿಶೀಲನೆ ಮತ್ತು ಫಲಿತಾಂಶ ಸುಧಾರಣೆ ಸಲುವಾಗಿ ಕಳೆದ ಸಾಲಿನಲ್ಲಿ ವಲಯಗಳಲ್ಲಿ ಅತಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿಷಯವಾರು ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಕರು ಬ್ಲೂೃಪ್ರಿಂಟ್ ಆಧಾರದಲ್ಲಿ ಪ್ರಶ್ನೆಗಳನ್ನು ಗುರುತಿಸಿ ಅವುಗಳನ್ನು ಬೋಧಿಸಿ ಮಕ್ಕಳ ಅಧ್ಯಯನಕ್ಕೆ ಒತ್ತು ಕೊಡಬೇಕು. ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪ್ರಗತಿಗೆ ಕ್ರಮ ಕೈಗೊಳ್ಳಬೇಕು. 50+ (ಪಾರ್ಟ್ ಆಫ್ ಪಾಸಿಂಗ್) ಅಂಕಗಳ ಆಧಾರದಲ್ಲಿ ನೋಟ್ಸ್, ಕ್ರಿಯಾಯೋಜನೆ ತಯಾರಿಸಿ ಪಠ್ಯಕ್ರಮ ಬೋಧಿಸಬೇಕು ಎಂದು ಮಾರ್ಗದರ್ಶನ ನೀಡಿದರು.

ಶಾಲೆಗೆ ಪಾಲಕರನ್ನು ಕರೆಸಿ ಮಗುವಿನ ಹಿಂದುಳಿದಿರುವಿಕೆಗೆ ಮನೆಯ ವಾತಾವರಣ ಕಾರಣವೇ ಎಂಬ ಬಗ್ಗೆ ಪರಿಶೀಲಿಸಿ, ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಯತ್ನಿಸಬೇಕು. ನಿರಂತರವಾಗಿ ಶಾಲೆಗೆ ಗೈರಾಗುವ ಮಕ್ಕಳ ಮನೆಗೆ ತೆರಳಿ, ಅವರ ನಿರಾಸಕ್ತಿ ಅಥವಾ ಗೈರಿಗೆ ಕಾರಣ ತಿಳಿದು ಮಗುವು ಶಾಲೆಗೆ ಹಾಜರಾಗಲು ಮನ ಒಲಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಶಿಕ್ಷಕರು ಶಿಕ್ಷಕರ ಜತೆ ವಾರಕ್ಕೆ ಒಂದು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಆಡಳಿತ ವಿಭಾಗದ ಡಿಡಿಪಿಐ ತಿಮ್ಮರಾಜು , ಅಭಿವೃದ್ಧಿ ವಿಭಾಗದ ಡಿಡಿಪಿಐ ಸುಂದರೇಶ್, ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ನಾಗರಾಜ್ ಅವರು ಮುಖ್ಯಶಿಕ್ಷಕರು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು. ಕಡೂರು ಬಿಇಒ ಎಂ.ಎಚ್.ತಿಮ್ಮಯ್ಯ, ಬೀರೂರು ಬಿಇಒ ಬುರ್ಹನುದ್ದೀನ್ ಚೋಪ್‌ದಾರ್, ವಿಷಯ ನಿರೀಕ್ಷಕರಾದ ಸತ್ಯನಾರಾಯಣ, ಕಾಂತರಾಜ್, ಶಿಕ್ಷಣ ಸಂಯೋಜಕರಾದ ಉಮೇಶ್, ಕೃಷ್ಣಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net