ಅತಿಯಾದ ಕಳೆನಾಶಕ ಸಿಂಪಡಣೆಯಿಂದ ಭೂಮಿಯಲ್ಲಿರುವ ಸೂಕ್ಷ್ಮ ಜೀವಿಗಳು, ಎರೆಹುಳಗಳು, ಜೇನುಹುಳುಗಳು ನಾಶವಾಗುತ್ತಿವೆ. ಕೀಟ, ಹಕ್ಕಿ, ಪ್ರಾಣಿಗಳು ಕೂಡ ಕಾಫಿ ಕೃಷಿಯ ಅವಿಭಾಜ್ಯ ಅಂಗವಾಗಿದ್ದು, ಆಹಾರ ಸರಪಳಿಯಲ್ಲಿ ಒಂದು ಜೀವಿಯನ್ನು ಇನ್ನೊಂದು ಜೀವಿ ತಿಂದು ಬದುಕುವುದರಿಂದ ಪರಿಸರ ಸಮತೋಲನದಲ್ಲಿರುತ್ತದೆ. ಆದ್ದರಿಂದ ಅತಿಯಾದ ರಾಸಾಯನಿಕ ಬಳಕೆ ಕೆಲ ಉಪಯುಕ್ತ ಜೀವಿಗಳನ್ನು ಸಂಪೂರ್ಣ ನಾಶಪಡಿಸುವುದಲ್ಲದೆ ಕಾಫಿ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದರು.