ಅಂತರಾಷ್ಟಿö್ರÃಯ ಮಾರುಕಟ್ಟೆಯಲ್ಲಿ ತೈಲಬೆಲೆ ಏರಿಕೆಯಾಗಿದೆ. ಹೀಗಾಗಿ ಇದುವರೆಗೂ ನಾಲ್ಕು ಲಕ್ಷ ಕೋಟಿ ರೂ. ಗೂ ಹೆಚ್ಚು ಹೊರೆಯಾಗಿದ್ದರೂ ಜನರಿಗೆ ಹೊರೆಯಾಗಬಾರದು ಎಂದು ಪ್ರಧಾನಿ ಮೋದಿ ಅವರು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಹಿಂದೆಯೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಬೇಕಿತ್ತು. ಆದರೆ ಟ್ಯಾಕ್ಸ್ ಇಳಿಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರು ಜನರ ಮೇಲಿನ ಹೊರೆ ಇಳಿಸಿದ್ದರು. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ಯುದ್ಧವೂ ಇರಲಿಲ್ಲ. ಆದರೆ ಅಂದು ವೀರಪ್ಪ ಮೊಯ್ಲಿ ಅವರು ವಾರ್ಷಿಕ ಆರು ಸಿಲಿಂಡರ್ ನೀಡುವುದಾಗಿ ಹೇಳಿದ್ದರು. ಕಾಂಗ್ರೆಸ್ ನಾಯಕರು ಮೊದಲು ಇದಕ್ಕೆ ಸ್ಪಷ್ಟನೆ ನೀಡಲಿ ಎಂದು ತಿರುಗೇಟು ನೀಡಿದರು.