ಸಂವಿಧಾನ ದುರುಪಯೋಗವಾದರೆ ಕಂಟಕ ನಿಶ್ಚಿತ

ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ ವಿತರಿಸಲಾಯಿತು.
ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಪೆನ್ ವಿತರಿಸಲಾಯಿತು.
Published on
ಮೂಡಿಗೆರೆ: ವಿಶ್ವಕ್ಕೆ ಮಾದರಿಯಾದ ಭಾರತದ ಸಂವಿಧಾನ ದುರುಪಯೋಗವಾದರೆ ಭಾರತೀಯರಿಗೆ ಕಂಟಕ ತಪ್ಪಿದ್ದಲ್ಲ. ಇಂತಹ ಬಲಿಷ್ಠ ಸಂವಿಧಾನ ಭಾರತೀಯರಿಗೆ ವರದಾನವಾಗಿದೆ ಎಂದು ವಕೀಲ ಚಂದ್ರಶೇಖರ್ ಹೇಳಿದರು.
ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್‌ಅವರು ಸಂವಿಧಾನ ರಚಿಸದೆ ಕೈಚೆಲ್ಲಿ ಕುಳಿತಿದ್ದರೆ ಸಮಾಜದ ಸ್ಥಿತಿ ಚಿಂತಾಜನಕವಾಗುತ್ತಿತ್ತು. ಅವರ ಆಶಯಗಳು, ಸಂವಿಧಾನದ ಮೂಲಕ ನೀಡಿರುವ ಸವಲತ್ತುಗಳು ಮತ್ತು ಕಾನೂನುಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಅವರಿಗೆ ಬಹುದೊಡ್ಡ ಗೌರವ ನೀಡಿದಂತಾಗುತ್ತದೆ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮನಸ್ಥಿತಿಯವರಿಂದಾಗಿ ದೇಶದ ಅಭಿವೃದ್ಧಿ ಹೊಂದಿದವಾಗುತ್ತದೆ. ಹಾಗಾಗದಂತೆ ಪ್ರತಿಯೊಬ್ಬ ಭಾರತೀಯರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಜೆಸಿಐ ವಿಸ್ಮಯ ಘಟಕದ ಮಾಜಿ ಅಧ್ಯಕ್ಷ ಕೃಷ್ಣೆಗೌಡ ಮಾತನಾಡಿ, ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ. ಎಲ್ಲರೂ ಅದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಜೀವನದಲ್ಲಿ ಸರಿದಾರಿಯಲ್ಲಿ ಕೊಂಡೊಯ್ಯಬೇಕು. ಸರ್ವರಿಗೂ ಸಮಪಾಲು ಸಮಬಾಳು ಎಂದು ಸಮಾನವಾಗಿ ಪ್ರತಿಯೊಬ್ಬರು ದೇಶದಲ್ಲಿ ಬದುಕುವ ಅವಕಾಶ ಕಲ್ಪಿಸಿದ್ದಾರೆ. ಅವರ ಆಶಯದಂತೆ ನಡೆದುಕೊಂಡಲ್ಲಿ ಯಾವುದೇ ಗಂಡಾಂತರ ಎದುರಾಗದು ಎಂದು ತಿಳಿಸಿದರು.
ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಪೆನ್ ವಿತರಣೆ ಮಾಡಲಾಯಿತು. ಮಹೇಂದ್ರ ಮೌರ್ಯ, ಸಾನಿಕ, ನಿರೀಕ್ಷಾ, ಗೋಪಾಲ್, ಎಚ್.ಎಂ.ರವಿ, ಸಾವಿತ್ರಿ, ಈರಯ್ಯ, ರವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net