ನಿಮಗೆ ಮಾನ ಮರ್ಯಾದೆ ಇದ್ರೆ, ಕ್ಷೇತ್ರದ ಬಗ್ಗೆ ಗೌರವ ಇದ್ರೆ, ಮಹಿಳೆಯರಿಗೆ ಮಾಡಿರುವ ಅನ್ಯಾಯ ಮನವರಿಕೆ ಮಾಡಿಕೊಂಡು, ನೀವು ನಾಳೆಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಡಿಕ್ಲೇರ್ ಮಾಡಿ. ನಾನು ಡಿಕ್ಲೇರ್ ಮಾಡ್ತೇನೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನೀವು ನನ್ನ ಕುಟುಂಬ ಬೀದಿಗೆ ತಂದಿದ್ದೀರ. ದಿನ ನಿತ್ಯ ಕೋರ್ಟ್‌ಗೆ ಆಲೆಯುವಂತೆ ಮಾಡಿದ್ದೀರಾ. ಸಾಲ ಮಾಡಿದ್ದೇನೆ ಎಂದು ಹೇಳುತ್ತಲೆ ಗದ್ಗತರಾದ ಶಾಸಕ ಟಿ.ಡಿ.ರಾಜೇಗೌಡ ವೇದಿಕೆಯಲ್ಲಿಯೇ ಗಳ ಗಳನೆ ಅತ್ತರು. ನಾನು ಚುನಾವಣೆಗೆ ನಿಲ್ಲುವುದಿಲ್ಲ. ನೀವು ಯಾರಾದ್ರೂ ನಿಲ್ಲಿ. ಕೆಟ್ಟ ಮನಸ್ಥಿತಿಯ ಮನುಷ್ಯ ಕ್ಷೇತ್ರದಲ್ಲಿ ಮತ್ತೆ ಶಾಸಕನಾಗಬಾರದು. ಆದ್ರೆ ಕ್ಷೇತ್ರಕ್ಕೆ ದೊಡ್ಡ ಮಾರಕ ಎಂದರು.