ನಾನೊಬ್ಬ ಹೋರಾಟಗಾರ, ಬೆನ್ನುಹಾಕಿ ಓಡಿಹೋಗುವವನಲ್ಲ

ಕೊಪ್ಪದ ಪುರ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು
ಕೊಪ್ಪದ ಪುರ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಶೃಂಗೇರಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು
Published on
ಕೊಪ್ಪ: ನಾನೊಬ್ಬ ಹೋರಾಟಗಾರ, ಸಮಸ್ಯೆಗೆ ಬೆನ್ನುಹಾಕಿ ಓಡಿ ಹೋಗುವವನಲ್ಲ. ಹೆದರಿಸಿದರೆ ಪಲಾಯನ ಮಾಡುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಕೊಪ್ಪದ ಪುರಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಟಿ.ಡಿ.ರಾಜೇಗೌಡರು ಬಂದ ನಂತರ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಆರಂಭವಾಯಿತು. ಅವರು ಅಭಿವೃದ್ಧಿ ದಲು ದ್ವೇಷ ತಂದಿದ್ದಾರೆ. ಾರ್ಮ್ ನಂ.53 ಸಾಗುವಳಿ ಚೀಟಿ ವಿತರಣೆ ವಿಚಾರದಲ್ಲಿ ನನ್ನ ವಿರುದ್ಧ ಲೋಕಾಯುಕ್ತದಲ್ಲಿ ವಜಾ ಆಗಿದ್ದ ಕೇಸ್‌ಗೆ ಮತ್ತೆ ಚಾರ್ಜ್ ಶೀಟ್ ಹಾಕಿಸಿದರು. ಇದು ಸುಳ್ಳು ಎಂದಾದರೆ ರಾಜೇಗೌಡರು ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಒಂದು ಕಡೆ ಅಧಿಕಾರಕ್ಕಾಗಿ ಸುಪ್ರಿಂ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿ ಮತ್ತೊಂದೆಡೆ ಜನರ ದಾರಿ ತಪ್ಪಿಸಲು ಆಣೆ, ಪ್ರಮಾಣ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿರುವ ಕೇಸ್ ಹಿಂಪಡೆದು ಬರಲಿ ನಾನು ಆಣೆ ಪ್ರಮಾಣಕ್ಕೆ ಸಿದ್ದ. ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳನ್ನು ಕೀಳಿಸಿದ್ದು, ದಿನೇಶ್ ಅವರ 15 ಎಕರೆ ತೋಟ ತೆರವು ಮಾಡಿಸಿದ್ದು, ಸುಳ್ಳು ಎಂದು ಪ್ರಮಾಣ ಮಾಡಲಿ ಎಂದರು.
ಅಂಚೆ ಮತಗಳ ಮರು ಎಣಿಕೆ ವಿಚಾರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಕಾಂಗ್ರೆಸಿಗರ ದಾರಿ ತಪ್ಪಿಸುವ ಆಣೆ ಪ್ರಮಾಣ ಪ್ರಯೋಜನವಿಲ್ಲ. ಈ ವಿಚಾರದಲ್ಲಿ ನಮ್ಮ ಕಾರ್ಯಕರ್ತರು ಗೊಂದಲಕ್ಕೆ ಬೀಳ ಬಾರದು. ಸುಪ್ರೀಂ ಕೋರ್ಟ್ ಈಗ ಮಧ್ಯಂತರ ತೀರ್ಪು ನೀಡಿದೆ. ಅದು ಅಂತಿಮವಲ್ಲ. ಆಶಾವಾದಿಯಾಗಿ ಹೋರಾಟ ಮುಂದುವರಿಸುತ್ತೇವೆ. ಎರಡು ತಿಂಗಳಲ್ಲಿ ಕ್ಷೇತ್ರಕ್ಕೆ ಹೊಸ ಶಾಸಕರು ಬರಲಿದ್ದಾರೆ ಎನ್ನುವ ಮೂಲಕ ನಾನು ಮತ್ತೆ ಶಾಸಕನಾಗುತ್ತೆನೆ ಎಂದು ಕಾರ್ಯಕರ್ತರಿಗೆ ಭರವಸೆ ಮೂಡಿಸಿದರು.
ಕೊಪ್ಪ ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಎನ್.ಆರ್ ಪುರ ಅಧ್ಯಕ್ಷ ನಿಲೇಶ್, ಶಂಗೇರಿ ಮಂಡಲ ಅಧ್ಯಕ್ಷ ಉಮೇಶ್, ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್ ಜೆ, ಬಿಜೆಪಿ ಮುಖಂಡ ಹರೀಶ್ ಶೆಟ್ಟಿ ಮಾತನಾಡಿದರು, ಜಿಲ್ಲಾ ಉಪಾಧ್ಯಕ್ಷ ಮಹಾಬಲ್ ರಾವ್, ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರುತಿ ರೋಹಿತ್ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net