ಚಿನ್ನಾಭರಣ ಕದ್ದ ಮನೆಗೆಲಸದವನ ಬಂಧನ

ಆಲ್ದೂರು ಪೊಲೀಸರು ಕಳ್ಳನಿಂದ ವಶಪಡಿಸಿಕೊಂಡ ಚಿನ್ನಾಭರಣವನ್ನು ಪ್ರದರ್ಶಿಸಿದರು. ವೃತ್ತ ನಿರೀಕ್ಷಕ ಸೋಮೇಗೌಡ, ಮೂರ್ತಪ್ಪ, ವಸಂತ್‌ಕುಮಾರ್, ಚೇತನ್ ಇತರರಿದ್ದರು.
ಆಲ್ದೂರು ಪೊಲೀಸರು ಕಳ್ಳನಿಂದ ವಶಪಡಿಸಿಕೊಂಡ ಚಿನ್ನಾಭರಣವನ್ನು ಪ್ರದರ್ಶಿಸಿದರು. ವೃತ್ತ ನಿರೀಕ್ಷಕ ಸೋಮೇಗೌಡ, ಮೂರ್ತಪ್ಪ, ವಸಂತ್‌ಕುಮಾರ್, ಚೇತನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂ.17ರಂದು ಚಿನ್ನದ ಮಾಂಗಲ್ಯ ಸರ,
  • ಮಂಗಳೂರು ಮೂಲದ ವಿನೋದ್ ಬಂಧಿತ ಆರೋಪಿ
ಆಲ್ದೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳವು ಮಾಡಿ ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ  86 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಮೂಲದ ವಿನೋದ್ ಬಂಧಿತ ಆರೋಪಿ. ಬಸರವಳ್ಳಿ ಮಂಜುನಾಥ್ ಗೌಡ ಅವರ ಮನೆಯಲ್ಲಿ ಜೂ.17ರಂದು ಚಿನ್ನದ ಮಾಂಗಲ್ಯ ಸರ, ಎರಡು ಬಳೆ, ಒಂದು ಕೈಚೈನ್ ಸೇರಿದಂತೆ ಒಟ್ಟು 86 ಗ್ರಾಂ ಚಿನ್ನ ಕಳವಾಗಿದೆ ಎಂದು 18ರಂದು ಮಂಜುನಾಥ್ ಗೌಡ ದೂರು ದಾಖಲಿಸಿದ್ದರು. ವೃತ್ತ ನಿರೀಕ್ಷಕ ಸೋಮೇಗೌಡ ಅವರ ನೇತೃತ್ವದ ತಂಡ ಮೊಬೈಲ್ ನಂಬರ್ ಸುಳಿವು ಹಿಡಿದು ತನಿಖೆ ನಡೆಸಿದಾಗ ಆರೋಪಿ ಚಿಕ್ಕಮಗಳೂರು ಜಿಲ್ಲೆಯಲ್ಲೇ ಸಿಕ್ಕಿಬಿದ್ದಿದ್ದಾನೆ. 
ಆರೋಪಿ ಸುಮಾರು ಎರಡು ವರ್ಷಗಳಿಂದ ಮಂಜುನಾಥ್ ಗೌಡ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಮನೆಯಲ್ಲಿ ಅವರ ಮಗಳು ಚಿನ್ನಾಭರಣಗಳನ್ನು ಇಟ್ಟಿದ್ದ ಜಾಗವನ್ನು ನೋಡಿಕೊಂಡಿದ್ದ ಆರೋಪಿ ಮನೆಯಲ್ಲಿ ಮಗಳು ಮಾತ್ರ ಇದ್ದ ಸಂದರ್ಭದಲ್ಲಿ  ದೋಚಿಕೊಂಡು ಪರಾರಿಯಾಗಿದ್ದ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಕಾರ್ಯಾಚರಣೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ರವಿ, ಅಪರಾಧ ವಿಭಾಗದ ಪಿಎಸ್‌ಐ ಮೂರ್ತಪ್ಪ, ಗಂಗಾಧರಸ್ವಾಮಿ, ಚೇತನ್‌ಕುಮಾರ್, ವಸಂತ್‌ಕುಮಾರ್, ರಾಜೇಶ್ವರಿ, ತನ್ವೀರ್, ಪ್ರಸನ್ನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net