ಕಾಗಲದಿಬ್ಬದಲ್ಲಿ ಮನೆ ಕುಸಿತ

ಸಿಂಸೆ ಸಮೀಪದ ಕಾಗಲದಿಬ್ಬದ ಅಶ್ವಿನಿ ಅವರ ಮನೆ ಕುಸಿದಿರುವುದು.
ಸಿಂಸೆ ಸಮೀಪದ ಕಾಗಲದಿಬ್ಬದ ಅಶ್ವಿನಿ ಅವರ ಮನೆ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೆಂಚು, ಛಾವಣಿ ಹಾಳಾಗಿದೆ.
  • ಸ್ಥಳ ಪರಿಶೀಲಿಸಿದ್ದು,

ಎನ್.ಆರ್.ಪುರ: ಮಳೆಯಿಂದಾಗಿ ಸಿಂಸೆ ಸಮೀಪದ ಕಾಗಲದಿಬ್ಬದ ಅಶ್ವಿನಿ ಮಂಜುನಾಥ್ ಎಂಬುವರ ಸಣ್ಣ ಮನೆ ಶನಿವಾರ ಬೆಳಗ್ಗೆ ಕುಸಿದಿದೆ. ಮಣ್ಣಿನ ಗೋಡೆಯಿಂದ ನಿರ್ಮಿತವಾದ ಮನೆ ಸುತ್ತ ಟಾರ್ಪಲ್ ಹಾಕಲಾಗಿತ್ತು. ಮನೆ ಕುಸಿಯುವ ಮುನ್ಸೂಚನೆ ಅರಿತು ಕುಟುಂಬಸ್ಥರು ಶುಕ್ರವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿ ಉಳಿದಿದ್ದರು. ಶನಿವಾರ ಬೆಳಗ್ಗೆ ಬಂದು ನೋಡಿದಾಗ ಮನೆ ಕುಸಿದಿತ್ತು. ಹೆಂಚು, ಛಾವಣಿ ಹಾಳಾಗಿದೆ. ಮನೆಯ ಒಳಗೆ ಇದ್ದ ಪಾತ್ರೆ ಇತರ ವಸ್ತುಗಳಿಗೆ ಹಾನಿಯಾಗಿದೆ. ಗ್ರಾಮ ಆಡಳಿತಾಧಿಕಾರಿ ಸಾನಿಯಾ, ಮೆಣಸೂರು ಪಿಡಿಒ ಸಂತೋಷ್‌ಕುಮಾರ್, ಜಿಪಂ ಇಂಜಿನಿಯರ್ ಸ್ನೇಹಾ ಸ್ಥಳ ಪರಿಶೀಲಿಸಿದ್ದು, ಶೇ.80ರಷ್ಟು ಮನೆ ಹಾನಿಯಾಗಿದೆ ಎಂದು ಅಂದಾಜು ಮಾಡಿದ್ದಾರೆ. ಶುಕ್ರವಾರ ರಾತ್ರಿ ಪ್ರಾರಂಭಗೊಂಡ ಮಳೆ ಶನಿವಾರ ಬೆಳಗ್ಗೆ 10 ಗಂಟೆಯವರೆಗೂ ಸುರಿದಿದೆ. ಕುದುರೆಗುಂಡಿಯ ಕಪಿಲಾ ಹಳ್ಳ, ಮುತ್ತಿನಕೊಪ್ಪದ ತುಂಗಾ ನದಿ ಉಕ್ಕಿ ಹರಿದವು. ಮಳೆ ನಡುವೆಯೇ ಭತ್ತದ ನಾಟಿ ನಡೆದಿದೆ. ಅಡಿಕೆ ತೋಟಗಳಿಗೆ ಬೋರ್ಡೋ ಸಿಂಪಡಿಸಲು ಮಳೆಯಿಂದ ಅಡ್ಡಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net