ಟೈಲರ್ ಅಸೋಸಿಯೇಷನ್ ಮತ್ತು ತಾಲೂಕು ಬೆಳೆಗಾರರ ಸಂಘದಿಂದ ಪಟ್ಟಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ನಾವು ಯಾವ ರಾಜ್ಯಕ್ಕೇ ಹೋದರೂ, ಹೊರ ರಾಜ್ಯದವರು ಕರ್ನಾಟಕಕ್ಕೆ ಬಂದಾಗಲೂ ಅವರೊಂದಿಗೆ ನಾವು ಅವರ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ದೇಶದ ಯಾವುದೇ ರಾಜ್ಯದವರೂ ಅವರ ಭಾಷೆ ಉಳಿಸಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ಬಂದಿಲ್ಲ. ಆದರೆ ಕನ್ನಡದ ನೆಲ, ಜಲ, ಭಾಷೆ ಉಳಿಸಿಕೊಳ್ಳಲು ಆಗಾಗ ಹೋರಾಟಗಳು ನಡೆಯುತ್ತವೆ ಎಂದರು.